”ಕರ್ನಾಟಕ ದೇವಾಲಯ ಕೋಶ’ ಯೋಜನೆಯಡಿ ಕನ್ಕಡ ನಾಡಿನ ಪ್ರತಿ ಗ್ರಾಮದ ಪ್ರಾಚೀನ ದೇವಾಲಯಗಳ ಸಮಗ್ರ ಮಾಹಿತಿ ಪ್ರಕಟಿಸುವುದು ಕನ್ನಡ ವಿಶ್ವವಿದ್ಯಾಲಯದ ಉದ್ದೇಶ.
ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ ವಿಭಾಗದ ನೆರನಿಂದ ಕೃತಿ ’ಚಿತ್ರದುರ್ಗ’ ಜಿಲ್ಲೆ’ ಪ್ರಕಟವಾಗಿದೆ. ದೇವಾಲಯಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳು. ಕಲೆ, ವಾಸ್ತುಶಿಲ್ಪ, ಹಬ್ಬ, ಉತ್ಸವ, ಸಂಸ್ಕೃತಿ ಹೀಗೆ ಎಲ್ಲವುಗಳ ಅಧ್ಯಯನಕ್ಕೆ ಸಹಕಾರಿ. ಈ ಕೃತಿಯು ಕ್ಷೇತ್ರ ಕಾರ್ಯ, ಸಮರ್ಪಕ ದಾಖಲೀಕರಣ ಹಾಗೂ ಭಿನ್ನ ಅಧ್ಯಯನ ಶಿಸ್ತುಗಳನ್ನು ಆಧರಿಸಿದೆ.
ಇತಿಹಾಸ, ಪುರಾತತ್ವ ಶಾಸ್ತ್ರ, ಕಲೆ ಮತ್ತು ವಾಸ್ತು ಶಿಲ್ಪ ಮುಂತಾದ ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ ಡಾ.ಎಸ್ ವೈ ಸೋಮಶೇಖರ್ ಅವರು 1970ರ ಜೂನ್ 28ರಂದು ಜನಿಸಿದರು.ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ,ಮೈಸೂರು ವಿಶ್ವವಿದ್ಯಾಲಯದಲ್ಲಿ (1991-93) ಎಂ,ಎ ಪದವಿಯನ್ನ, ಹಂಪೆಯ ಬಜಾರುಗಳು ಎಂಬ ವಿಷಯದ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಎಂ.ಫಿಲ್ ಪದವಿಯನ್ನು (1993-94), ವಿಜಯನಗರ ಸಾಮ್ರಾಜ್ಯದ ಸೈನ್ಯ ವ್ಯವಸ್ಥೆ ಮತ್ತು ಯುದ್ಧ ನೀತಿ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು (2000), ಭಾರತದ ಸಾಹಿತ್ಯ ಎಂಬ ವಿಷಯದಲ್ಲಿ , ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಡಿಪ್ಲೋಮ ಪಡೆದ ಅವರು ...
READ MORE