ಕರ್ನಾಟಕದ ಜನಮಾನಸಕ್ಕೆ ಸ್ವಾಭಿಮಾನವನ್ನು, ಅಖಿಲ ಭಾರತ ಮಟ್ಟದಲ್ಲಿ ಸೂಕ್ತ ಪ್ರಾತಿನಿತ್ಯವನ್ನು ಮತ್ತು ಸಾಂಸ್ಕೃತಿಕ ಮನ್ನಣೆಯನ್ನು ತಂದುಕೊಡುವಲ್ಲಿ ಭಾಷ ಚಳುವಳಿಗಳು ಪ್ರಮುಖ ಪಾತ್ರವಹಿಸಿದೆ. ಏಕೀಕರಣದ ಕಾಲಘಟ್ಟದಿಂದ ಇವತ್ತಿನವರೆಗೂ ಭಾಷಾ ಚಳವಳಿ ಕನ್ನಡಿಗರ ಮಟ್ಟಿಗೆ ತನ್ನ ಅನನ್ಯತೆಯನ್ನು, ಅಗತ್ಯತೆಯನ್ನು ಮನಗಾಣಿಸುತ್ತಲೇ ಬಂದಿದೆ. ಇಂತಹ ಭಾಷಾ ಆಂದೋಲನ ಹಾಗೂ ವಿದ್ಯಮಾನಗಳ ಪ್ರಾತಿನಿಧಿಕ ವ್ಯಕ್ತಿತ್ವಗಳನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಲೇಖಕ ಸಿ.ಆರ್. ಗೋವಿಂದರಾಜರು ಈ ಕೃತಿಯನ್ನು ರಚಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಸಿ.ಆರ್. ಗೋವಿಂದರಾಜು ಅವರು ಜನಿಸಿದ್ದು 1968 ಮಾರ್ಚ್ 23ರಂದು ಜನಿಸಿದರು. ಇತಿಹಾಸ, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಗೋವಿಂದರಾಜು ಅವರ ಪ್ರಮುಖ ಕೃತಿಗಳೆಂದರೆ ಕರ್ನಾಟಕದ ಏಕೀಕರಣ ಚಳವಳಿ ಹಾಗೂ ಕನ್ನಡ ಸಾಹಿತ್ಯ, ಕನ್ನಡ ಚಳವಳಿಗಳು, ಇತಿಹಾಸ ಭಾಗ-೧, ನವ ಚಾರಿತ್ರಿಕವಾದ, ಮೋವ್‌ಮೆಂಟ್ ಫಾರ್ ಯುನೈಟೆಡ್ ಕರ್ನಾಟಕ, ಚಾರಿತ್ರಿಕ ಕರ್ನಾಟಕ, ಸಿನಿಮಾ ಸಂಕಥನ, ಮುಂಬೈ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳು, ಕರ್ನಾಟಕದ ಮುಖ್ಯಮಂತ್ರಿಗಳು ಮುಂತಾದವು. ...
READ MORE