ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಎಂ.ಪಿ.ಪ್ರಕಾಶರ ’ಡೊಮಿಂಗೋಸ್ ಪಿಯಾಸ್ ಕಂಡ ವಿಜಯನಗರ’ ಕೃತಿಯನ್ನು ಮರುಮುದ್ರಿಸಲಾಗಿದೆ. 2000 ರಲ್ಲಿ ಈ ಕೃತಿ ಮರುಮುದ್ರಣಗೊಂಡಿದೆ. ದೇಶ-ವಿದೇಶಿ ಪ್ರವಾಸಿಗರು ಹಾಗೂ ಇತಿಹಾಸಕಾರರ ಕಣ್ಣಲ್ಲಿ ವಿಜಯನಗರದ ವೈಭವದ ವಿವರಣೆಯನ್ನು ಕಟ್ಟಿಕೊಡುವ ಕೆಲಸವು ಜನಸಾಮಾನ್ಯರಲ್ಲಿ ಐತಿಹಾಸಿಕ ಪ್ರಜ್ಞೆಯ ಜಾಗೃತಿಗೆ ಪೂರಕವಾಗುತ್ತದೆ. ಈ ಹಿನ್ನೆಲೆಯಲ್ಲಿ, ಈ ಕೃತಿಯು ಮಹತ್ವ ಪಡೆದುಕೊಳ್ಳುತ್ತದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರ ಕೆರೆ ಗ್ರಾಮದಲ್ಲಿ 1940ರ ಜುಲೈ 11 ರಂದು ಎಂ.ಪಿ. ಪ್ರಕಾಶ (ಮರಿಸ್ವಾಮಯ್ಯ ಮಠದ ಪಾಟೀಲ ಪ್ರಕಾಶ) ಜನಿಸಿದರು. ಲೇಖಕ, ನಟ, ರಂಗಕರ್ಮಿ, ಮೃದುಭಾಷಿ, ಸಾಂಸ್ಕೃತಿಕ ಜೀವಿ ಹಾಗೂ ಸಜ್ಜನ ರಾಜಕಾರಣಿ ಹೀಗೆ ಬಹುಮುಖ ವ್ಯಕ್ತಿತ್ವದ ಎಂ.ಪಿ.ಪ್ರಕಾಶ, ವೃತ್ತಿಯಿಂದ ವಕೀಲರು. 1964 ರಲ್ಲಿ ಹಡಗಲಿಗೆ ಆಗಮಿಸಿ, 1973 ರಲ್ಲಿ ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1979 ರಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಆದರೂ ಛಲಬಿಡದೇ 1983 ರಲ್ಲಿ ಹಡಗಲಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. ಅಂದಿನಿಂದ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ...
READ MORE