ಚಾವುಂಡರಾಯನ ಶಿಲ್ಕಕಲಾವೈಭವವಾಗಿ ಕಂಗೊಳಿಸುತ್ತಿರುವ ಶ್ರವಣಬೆಳಗೊಳದ ಬಾಹುಬಲಿಯ ಬೃಹತ್ ವಿಗ್ರಹ ಹಾಗೂ ಶ್ರವಣ ಬೆಳಗೊಳದ ಇತಿಹಾಸ ಕುರಿತು ಲೇಖಕ ಟಿ.ಎಸ್. ಗೋಪಾಲ್ ಅವರು ಬರೆದ ಕೃತಿ ಇದು. ಶ್ರವಣ ಬೆಳಗೊಳವು ಕೇವಲ ಐತಿಹಾಸಿಕ ಹಾಗೂ ಪ್ರವಾಸಿ ಕೇಂದ್ರವಾಗಿರದೇ ಅದರ ಸಾಂಸ್ಕೃತಿಕ ಹಿರಿಮೆ-ಗರಿಮೆಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ. ಜೈನ ಸಂಪ್ರದಾಯದಡಿ ನಡೆದು ಬರುತ್ತಿರುವ ಆಚರಣೆ ಹಾಗೂ ಬೆಳಗೊಳ ಒಂದು ನಗರವಾಗಿ ವಿಶ್ವವಿಖ್ಯಾತಿ ಪಡೆದ ಬಗೆಯನ್ನು ವಿವರಿಸಲಾಗಿದೆ.
ಲೇಖಕ ಟಿ. ಎಸ್. ಗೋಪಾಲ್ ಅವರ ಹೆಸರು ತಿರು ಶ್ರೀನಿವಾಸಾಚಾರ್ಯ ಗೋಪಾಲ್. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2013) ದೊರೆತಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಹಾಗೂ ಎಂ. ಎ. ಪದವಿ (ಚಿನ್ನದ ಪದಕ) ಪಡೆದಿರುವ ಅವರು ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ...
READ MORE