ನೊಳಂಬರ ಕಾಲದ ದೇವಾಲಯಗಳ ಬಗ್ಗೆ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿದ ಸಂಶೋಧನಾ ಕೃತಿ-ನೊಳಂಬ ದೇವಾಲಯಗಳು. ಈ ದೇವಾಲಯಗಳ ಕೇಂದ್ರ ಪ್ರದೇಶವಾದ ಹೇಮಾವತಿ ಮಾತ್ರವಲ್ಲದೇ, ನಂದಿ, ಅರಳಗುಪ್ಪೆ, ಆವನಿ, ಧರ್ಮಪುರಿ ಮುಂತಾದ ಪ್ರದೇಶ ವ್ಯಾಪ್ತಿಯ ದೇವಾಲಯಗಳ ಚಾರಿತ್ರಿಕ ಹಿನ್ನೆಲೆಯನ್ನು ಸಹ ಸವಿವರವಾಗಿ ಲೇಖಕರು ಚರ್ಚಿಸಿದ್ದಾರೆ.
ಲೇಖಕ ಸುಂಕಂ ಗೋವರ್ಧನ ಮೂಲತಃ ಬೆಂಗಳೂರಿನವರು. ಮೈಸೂರಿನ ಕ.ರಾ.ಮು. ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬಿ.ಎಂ.ಶ್ರೀ ಪ್ರತಿಷ್ಟಾನದಿಂದ ಹಸ್ತಪ್ರತಿ ಶಾಸ್ತ್ರ ಹಾಗೂ ಕನ್ನಡ ಭಾಷಾಶಾಸ್ತ್ರ ತರಗತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೊಮಾ ಪದವೀಧರರು. ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ ಇವರ ಆಸಕ್ತಿಯ ಕ್ಷೇತ್ರಗಳು. ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಇತಿಹಾಸ ಮತ್ತು ಪುರಾತತ್ವ ಸಮಾವೇಶ, ವಿಜಯನಗರ ಅಧ್ಯಯನಗಳು, ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ವಿದ್ವತ್ ಸಭೆಗಳು, ಬಿ.ಎಂ.ಶ್ರೀ ಪ್ರತಿಷ್ಟಾನದ ಹಸ್ತಪ್ರತಿ ಸಮಾವೇಶ ಸೇರಿದಂತೆ ಇತರೆಡೆ ಸುಮಾರು 30ಕ್ಕೂ ಹೆಚ್ಚಿನ ಬಂಧಗಳನ್ನು ಮಂಡಿಸಿದ್ದಾರೆ. ಸಾಹಿತ್ಯಕ ಪತ್ರಿಕೆ, ಅಭಿನಂದನಾ ಗ್ರಂಥಗಳು ಹಾಗೂ ಇತಿಹಾಸ ದರ್ಪಣ ...
READ MORE