ಕಾಸರಗೋಡು ಇಂದು ಕರ್ನಾಟಕ ಮತ್ತು ಕೇರಳದ ನಡುವೆ ಸಿಲುಕಿಕೊಂಡಿದೆ. ಕಾಸರಗೋಡು ಇಂದು ಭೌತಿಕವಾಗಿ ಕರ್ನಾಟಕದಿಂದ ಹೊರಗಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ ರಕ್ತಮಾಂಸದ ಭಾಗವೇ ಆಗಿದ್ದು ನಿತ್ಯವೂ ಹೋರಾಟದ ಭೂಮಿಯಾಗಿದೆ. ಕಾಸರಗೋಡಿನಲ್ಲಿ ಇಂದಿಗೂ ಕೂಡ ಶೇ 90 ರಷ್ಟು ಕನ್ನಡಿಗರು ಇದ್ದಾರೆ. ಭೌಗೋಳಿಕವಾಗಿ ನೆರೆಯ ಕೇರಳಕ್ಕೆ ಸೇರಿದವರಾಗೆ ಭಾಸವಾಗುತ್ತಿದ್ದರೂ ಅಲ್ಲಿನ ಕೇರಳಿಗರಿಗೆ ಮಾನಸಿಕವಾಗಿ ಹೊರಗಿನವರಂತೆ ಕಾಣುತ್ತಾರೆ. ಇಲ್ಲಿನ ಕನ್ನಡಿಗರಿಗೆ ಭೌಗೋಳಿಕವಾಗಿ ಅನ್ಯರಂತೆ ಭಾಸವಾಗುತ್ತಿರುವ ಕಾಸರಗೋಡು ಕನ್ನಡಿಗರು ಅನುಭವಿಸುತ್ತಿರುವ ನೋವು, ವೇದನೆ ಅಷ್ಟಿಷ್ಟಲ್ಲ. ಕಳೆದ ಐವತ್ತು ವರ್ಷದಿಂದ ಕರ್ನಾಟಕಕ್ಕೆ ಸೇರಬೇಕು ಎಂಬ ಬೇಡಿಕೆ ಇಟ್ಟು ಹೋರಾಡುತ್ತಿರುವ ಅಲ್ಲಿನ ಹೋರಾಟದ ಚಿತ್ರಣವನ್ನು ಈ ಕಾಲಘಟ್ಟದ ಏರಿಳಿತಕ್ಕೆ ತಕ್ಕಂತೆ ಡಾ. ಸದಾನಂದ ಪೆರ್ಲ ರವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಡಾ. ಸದಾನಂದ ಪೆರ್ಲ ಅವರು ಸದ್ಯ ಗುಲ್ಬರ್ಗ ನಿವಾಸಿ. ಆಕಾಶವಾಣಿಯ ಕಾರ್ಯಕ್ರಮ ವಿಭಾಗದಲ್ಲಿ 24 ವರ್ಷದ ಸೇವಾ ಅನುಭವ ಇರುವ ಅವರು ಅದಕ್ಕೂ ಮುನ್ನ ಕೆಲ ಕಾಲ ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕ/ವರದಿಗಾರ ಆಗಿದ್ದರು. ಕಾಸರಗೋಡಿನ ಕನ್ನಡ ಹೋರಾಟ, ಶರಣ ಹೆಂಡದ ಮಾರಯ್ಯ, ಒಂದಿಷ್ಟು ಮಾತು, ಮಧ್ಯಮ ಮಾರ್ಗ, ಹರ್ಷದ ಅತಿಥಿ ಅವರ ಪ್ರಕಟಿತ ಕೃತಿಗಳು. ...
READ MORE