ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳ ಪ್ರಾಚೀನ ದೇವಾಲಯಗಳ ಸಂಕ್ಷಿಪ್ತ ವಿವರಗಳು, ಛಾಯಾಚಿತ್ರಗಳು ಹಾಗೂ ಶಾಸನೋಕ್ತ ಮಾಹಿತಿ ಒಳಗೊಂಡ ಕೃತಿ ‘ಉಡುಪಿ ಜಿಲ್ಲೆಯ ಪ್ರಾಚೀನ ದೇವಾಲಯಗಳು ಭಾಗ-5, ಕಾರ್ಕಲ ಮತ್ತು ಹೆಬ್ರಿ’. ರಾಜೇಶ್ ನಾಯ್ಕ ಅವರು ಈ ಕೃತಿ ರಚಿಸಿದ್ದಾರೆ. ಕಾರ್ಕಳ ತಾಲೂಕಿನ 37 ಹಾಗೂ ಹೆಬ್ರಿ ತಾಲೂಕಿನ 14 ದೇವಾಲಯಗಳು ಹೀಗೆ ಒಟ್ಟು 51 ದೇವಾಲಯಗಳ ಮಾಹಿತಿ ಇದೆ. ಹೆಚ್ಚಿನ ದೇಗುಲಗಳು ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದರೂ ಕೆಲವು ದೇಗುಲಗಳು ಇನ್ನೂ ತಮ್ಮ ಮೂಲ ರೂಪದಲ್ಲಿ ಅವನತಿಯತ್ತ ಸಾಗುತ್ತಿರುವುದೂ ಕಂಡುಬರುತ್ತದೆ. ಕಣ್ಣ ಮುಂದೆ ಇದ್ದೂ ಕಾಣದಂತಿರುವ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವೇ ಈ ಪುಸ್ತಕ.
ಲೇಖಕ ರಾಜೇಶ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದವರು. ಉಡುಪಿಯಲ್ಲಿ ಪದವಿ ಪೂರ್ವ ಶಿಕ್ಷಣ, ಉಡುಪಿ ಜಿಲ್ಲೆಯ ನಿಟ್ಟೆಯ ಡಾ.ಎನ್ ಎಸ್ ಎ ಎಂ ಪ್ರಥಮ ದರ್ಜೆ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರು. ಬೆಳಗಾವಿಯ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಎಜ್ಯುಕೇಶನ್ & ರಿಸರ್ಚ್‍ನಲ್ಲಿ ಎಂಬಿಎ ಪದವಿ ಪಡೆದು, 1998ರಲ್ಲಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ನಂತರ, 2000ರಲ್ಲಿ ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದಕ್ಕೆ ಸೇರಿದರು. 2013ರಿಂದ ’ಬ್ರಾಂಡಿಂಗ್ ಹಾಗೂ ಎಡ್ವರ್ಟೈಸಿಂಗ್’ ಸೇವೆ ನೀಡುವ ಕನ್ಸಲ್ಟನ್ಸಿಯನ್ನು ಉಡುಪಿಯಲ್ಲಿ ಆರಂಭಿಸಿ, ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ. ಇತಿಹಾಸ, ಪ್ರಾಚೀನ ದೇವಾಲಯಗಳು, ಚಾರಣ ...
READ MORE