ಲೇಖಕ ಶಿವಶರಣ ಕೆ. ಗುಗ್ಗರಿ ಅವರ ’ಆಲಮೇಲ ತಾಲ್ಲೂಕು ದರ್ಶನ’ ಕೃತಿಯು ಐತಿಹಾಸಿಕ ಸಂಶೋಧನೆ ಹಾಗೂ ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡ ಈ ಕೃತಿ, ಆಲಮೇಲ ತಾಲೂಕಿನ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳ ಕಾರಣವಾಗಿ ಓದು ಬರಹಗಳಿಂದ ಜನರು ದೂರ ಸರಿಯುತ್ತಿರುವ ಇಂದಿನ ಕಾಲದಲ್ಲಿ ಗುಗ್ಗರಿಯವರು ಐತಿಹಾಸಿಕ ಸಂಶೋಧನೆಯ ವಿಭಾಗಕ್ಕೆ ಒಳಪಡುವ “ಆಲಮೇಲ, ತಾಲೂಕು ದರ್ಶನ” ಕೃತಿ ರಚಿಸಿ ಓದುಗರ ಗಮನ ಸೆಳೆದಿದ್ದಾರೆ.
ಗುಗ್ಗರಿ ಅವರು ಆಂಗ್ಲಭಾಷಾ ಸಾಹಿತ್ಯದ ವಿದ್ಯಾರ್ಥಿಯಾಗಿದು, “ಆಲಮೇಲ ತಾಲೂಕು ದರ್ಶನ” ಕೃತಿಯನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂವರ್ಧನೆಗೆ ಕಾರಣರಾಗಿದ್ದಾರೆ. ಅಲ್ಪವಿರಾಮದಿಂದ ಅರ್ಧವಿರಾಮದತ್ತ: ಮುಂದೆ ಪೂರ್ಣ ವಿರಾಮದ ಕಡೆಗೆ ಸಾಗುವ ಸಂಶೋಧನೆಗೆ ಸಾಕ್ಷಿಯಾಗಿ ನಿಲ್ಲುವ ಕೃತಿ ಇದಾಗಿದೆ.
ಲೇಖಕ ಶಿವಶರಣ ಕೆ. ಗುಗ್ಗರಿ ಅವರು ಎಂ.ಎ, ಬಿ.ಈಡಿ. ಮತ್ತು ಡಿಪ್ಲೊಮಾ (ಇಂಗ್ಲಿಷ್) ಪದವೀಧರರು. ಸುಮಾರು 30 ವರ್ಷಗಳಿಂದ ವಿವಿಧ ಸರಕಾರಿ ಪ್ರೌಢ ಶಾಲೆಗಳಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ, ಸರಕಾರಿ ಆಂಗ್ಲಮಾಧ್ಯಮ - ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ.) ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಆಂಗ್ಲಭಾಷಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪ್ರಸ್ತುತ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರೌಢ ಶಾಲಾ ವೃಂದದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಕೃತಿಗಳು: ಆಲಮೇಲು ತಾಲೂಕು ದರ್ಶನ ...
READ MORE