‘ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಪ್ರಭಾವ ಮತ್ತು ಪರಿಣಾಮಗಳು’ ಎನ್ನುವ ರಶ್ಮಿ ಎಸ್. ಅವರ ಡಾಕ್ಟರೇಟ್ ಮಹಾ ಪ್ರಬಂಧವನ್ನು ಕೃತಿಯನ್ನಾಗಿಸಲಾಗಿದೆ.
ಕರ್ನಾಟಕದ 1970 ರ ದಶಕದ ರಾಜಕಾರಣವನ್ನು ಸಾಂಸ್ಕೃತಿಕ ಲೋಕದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಪೂರಕವಾಗಿದೆ. ಆ ಕಾಲಘಟ್ಟದ ಅನೇಕ ರಾಜಕೀಯ ಪಲ್ಲಟ, ಆಯಾಮಗಳನ್ನು ಚರ್ಚಿಸಲು ಪ್ರಯತ್ನಿಸಿರುವ ಕೃತಿ ಎನ್ನಬಹುದು.
1970-80 ರ ದಶಕದಲ್ಲಿ ಉಂಟಾದ ಪ್ರಮುಖ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳ ವಿಸ್ತೃತ ಅಧ್ಯಯನವನ್ನು , ವಿವಿಧ ವಿಶ್ಲೇಷಣೆಗಳನ್ನು ಇಲ್ಲಿ ಚರ್ಚಿಸಿ ಅಧ್ಯಯನ ನಡೆಸಲಾಗಿದೆ.
ಅನೇಕ ಸಾಹಿತ್ಯ ಕೃತಿಗಳು, ಸರ್ಕಾರಿ ವರದಿಗಳು, ಪತ್ರಿಕಾ ಮಾಧ್ಯಮದಲ್ಲಿ ವ್ಯಕ್ತವಾಗಿದ್ದ ವೈವಿಧ್ಯಮಯ ಚರ್ಚೆಗಳು ಹಾಗೂ ಅಭಿಪ್ರಾಯಗಳು, ಸಂದರ್ಶನಗಳು, ಪ್ರದರ್ಶನ ಕಲೆಗಳ ಮೂಲಕ ವ್ಯಕ್ತವಾದ ಮಾಹಿತಿಯನ್ನು ಸಂಶೋಧನೆ ನಡೆಸಿ ಈ ಕೃತಿಯ ಮೂಲಕ ಹೊರತಂದಿದ್ದಾರೆ.
ಲೇಖಕಿ ಡಾ. ರಶ್ಮಿ ಎಸ್: ಮೂಲತಃ ಮೈಸೂರು ಸಮೀಪದ ಮೂಗೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಹಾಗೂ ಹಿಂದಿ ರತ್ನ, ಎಪಿಗ್ರಫಿಯಲ್ಲಿ ಡಿಪ್ಲೊಮಾ ಪದವೀಧರರು. ಕೃತಿಗಳು: ಗೋಪಾಲಕೃಷ್ಣ ಗೋಖಲೆ (2001) ತುರ್ತುಪರಿಸ್ಥಿತಿ: ಪ್ರಭಾವ ಮತ್ತು ಪರಿಣಾಮಗಳು (2008). 15ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ...
READ MORE