ರಾಯಚೂರಿನ ಉತ್ತರಕ್ಕೆ ಕೃಷ್ಣೆ ಮತ್ತು ದಕ್ಷಿಣಕ್ಕೆ ತುಂಗಭದ್ರಾ ನದಿಗಳ ನಡುವಿನ ಪ್ರದೇಶವೆ ಈ ಜಿಲ್ಲೆಯ ನೆಲೆ. ಈ ಜಿಲ್ಲೆಯಲ್ಲಿ ದೊರೆತ ಮಸ್ಕಿ ಶಾಸನವು ಸೇರಿದಂತೆ ಮಾನವಿ ತಾಲೂಕಿನ ವಟಗಲ್ಲು , ಆನಂದಗಲ್ಲು , ಹಾಲಾಪುರ , ನವಿಲುಕಲ್ಲು , ಮುಂತಾದ ಕಡೆ ಇತಿಹಾಸ ಪೂರ್ವ ಯುಗದ ಜನರ ವಸತಿ ಸ್ಥಳಗಳ ಕುರುಹುಗಳು ದೊರೆತಿರುವುದು ಈ ಕೃತಿಯಲ್ಲಿ ದಾಖಲಾಗಿದೆ. ಒಟ್ಟಾರೆ ರಾಯಚೂರು ಜಿಲ್ಲೆಯ ಸಾಂಸ್ಕೃತಿಕ ಅಧ್ಯಯನದ ಉತ್ತಮ ಕೃತಿ ಇದಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರಾಗಿರುವ ಅಮರೇಶ ಯತಗಲ್ ಅವರು ರಾಯಚೂರು ಜಿಲ್ಲೆಯ ಯತಗಲ್ ನವರು. ಸುರಪುರ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿರುವ ಅವರು ಇತಿಹಾಸ ಬರವಣಿಗೆಯಲ್ಲಿ ಆಸಕ್ತರಾಗಿದ್ದಾರೆ. ...
READ MORE