ಮಧ್ಯಯುಗೀನ ದಕ್ಷಿಣ ಭಾರತದ ಚರಿತ್ರೆಯಲ್ಲಿ ವಿಜಾಪುರದ ಆದಿಲಶಾಹಿಗಳ ಪಾತ್ರ ಪ್ರಮುಖ. ಆದಿಲ್‌ಶಾಹಿಗಳ ಮೂಲ ಆಕರಗಳು ಕನ್ನಡದಲ್ಲಿ ಸಾಕಷ್ಟು ದೊರಕದೇ ಇರುವುದು ಮತ್ತು ಪರ್ಶಿಯನ್, ದಖಣಿ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಮುಖ ಕೆಲಸವನ್ನು ಡಾ. ಎಂ.ಎಂ. ಕಲಬುರ್ಗಿ ಅವರ ನೇತೃತ್ವವದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಕೈಗೆತ್ತಿಕೊಂಡಿತ್ತು. ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ಸಂಪಾದಕತ್ವದಲ್ಲಿ ಆದಿಲ ಶಾಹಿ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗಿದೆ. ಈ ಸರಣಿಯ 14ನೇ ಸಂಪುಟ. ಫರ್ಮಾನುಗಳು (ಆದಿಲಶಾಹಿಗಳ ಆದೇಶಗಳು) ಭಾಗ-1. ಪಾರಸಿ, ಮರಾಠಿ ಭಾಷೆಯಲ್ಲಿದ್ದ ಈ ಆದೇಶಗಳನ್ನು ಡಾ. ಮಹನೂರ್ ಜಮಾನೀ ಬೇಗಂ, ಎ.ಎಚ್. ಮಾಸಾಪತಿ, ವಿದ್ಯಾ ಗುಮಾಸ್ತೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.