ಬರಹಗಾರರಾದ ಅಶೋಕ ಶೆಟ್ಟರ್ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅವರ ’ಚರಿತ್ರೆ- ಸಮಾಜ- ಸಾಹಿತ್ಯ’ ಪುಸ್ತಕವು ಕತೆಗಾರ ಮಾಸ್ತಿಯವರ ಚೆನ್ನಬಸವನಾಯಕ, ಚಿಕವೀರರಾಜೇಂದ್ರ ಐತಿಹಾಸಿಕ ಕಾದಂಬರಿಗಳನ್ನು ಬಗ್ಗೆ ವಿಮರ್ಶಾತ್ಮಕ ನೆಲೆಯಲ್ಲಿ ಗ್ರಹಿಸಿದ್ದಾರೆ. ’ಕನ್ನಡ ಸಾಹಿತ್ಯದ ಪ್ರಗತಿಶೀಲ ಪರ್ವ ; ಒಂದು ಚಾರಿತ್ರಿಕ ಹಿನ್ನೋಟ’ಎನ್ನುವ ಶೀರ್ಷಿಕೆಯಡಿ ಪ್ರಗತಿಶೀಲ ಚಳವಳಿಗಳ ಕಾರ್ಯ ಸ್ವರೂಪ, ಭಾಷಾ ಸಾಹಿತ್ಯಗಳಲ್ಲಿ ಪ್ರಗತಿಶೀಲತೆಯ ಆಶಯಗಳಿಗೆ ಸಂಘಟಿತ ರೂಪ ನೀಡುವ ಪ್ರಯತ್ನಗಳ ಬಗ್ಗೆ ಸಾಕಷ್ಟು ವಿವರಣೆ ನೀಡಲಾಗಿದೆ.
ಸ್ಥಳೀಯ ಚರಿತ್ರೆಗಳ ಅಧ್ಯಯನ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳ ಬಗ್ಗೆ ಹಲವಾರು ಮಹತ್ವಪೂರ್ಣ ಲೇಖನ ಬರೆದಿದ್ದಾರೆ. ಸಂಶೋಧಕರಾದ ಷ. ಶೆಟ್ಟರ್ ಅವರ ಇತಿಹಾಸ ಸಂಶೋಧನೆಗಳ ಬಗ್ಗೆ ಮೌಲ್ಯಯುತ ಅವಲೋಕನವನ್ನೂ ಲೇಖಕ ಅಶೋಕ ಶೆಟ್ಟರ್ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.
ಅಶೋಕ ಶೆಟ್ಟರ್ ಸೃಜನ ಮತ್ತು ಸೃಜನೇತರ ಪ್ರಕಾರಗಳೆರಡರಲ್ಲೂ ಆಸಕ್ತಿ ಹೊಂದಿರುವ ಅಶೋಕ ಶೆಟ್ಟರ್ ಕನ್ನಡದ ಗಮನಾರ್ಹ ಬರಹಗಾರರಲ್ಲೊಬ್ಬರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಪೂರೈಸಿದ ಇವರು ಐದು ವರ್ಷ (1981-86) ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಸಂಶೋಧನ ವಿದ್ಯಾರ್ಥಿ ಯಾಗಿದ್ದವರು. ೧೯೮೬ರಿಂದೀಚೆ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. (ವಿಶ್ವವಿದ್ಯಾಲಯದ ವಾಚನಾಲಯದೊಳಗೆ' ಕವನ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಇವರು ಸಾಹಿತ್ಯ ಹಾಗೂ ಇತಿಹಾಸ ಕುರಿತು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಬರೆದ ಹಲವಾರು ಲೇಖನಗಳು ಪ್ರಕಟವಾಗಿವೆ. “ಸ್ಟಡೀಸ್ ಇನ್ ಕರ್ನಾಟಕ ...
READ MORE