ಲೇಖಕ ಸಂತೋಷ್ ಹಾನಗಲ್ಲ ಅವರು ಬರೆದ ಇತಿಹಾಸ ಸಂಬಂಧಿತ ಕೃತಿ ʼನಮ್ಮ ಕೋಟೆಗಳುʼ. ಪುಸ್ತಕವು ಕರ್ನಾಟಕದ ಸಾವಿರಾರು ವರ್ಷಗಳು ಹಳೆಯದಾದ, ನಮ್ಮ ನಾಡಿನ ಇತಿಹಾಸದ ಸಂಕೇತವೇ ಆಗಿರುವ ಕೋಟೆಗಳ ಕುರಿತಾಗಿ ಹೇಳುತ್ತದೆ. ನಾಡನ್ನಾಳಿದ ರಾಜ ವಂಶಸ್ಥರು ತಮ್ಮನ್ನು ಅಂಗ ರಾಜ್ಯಗಳಿಂದ ಅಥವಾ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಮಾರ್ಗವಾಗಿ ಹಲವಾರು ಕೋಟೆಗಳನ್ನು ಕಟ್ಟಿದ್ದಾರೆ. ಅವುಗಳಲ್ಲಿ ಕೆಲವು ಪ್ರಸಿದ್ದ ಕೋಟೆಗಳು, ಚಿತ್ರದುರ್ಗಕೋಟೆ, ಸವದತ್ತಿಕೋಟೆ, ಬೆಂಗಳೂರು ಕೋಟೆ, ಬೀದರ್ ಕೋಟೆ, ಶ್ರೀರಂಗಪಟ್ಟಣಕೋಟೆ, ಕೊಪ್ಪಳ ಕೋಟೆ ಹಾಗೂ ಇನ್ನೂ ಅನೇಕ ಕೋಟೆಗಳನ್ನು ನಾವು ಕರ್ನಾಟಕದಾದ್ಯಂತ ಕಾಣಬಹುದಾಗಿದೆ.
ಸಂತೋಷ್ ಹಾನಗಲ್ಲ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದಾರೆ. ಕೃತಿಗಳು: ಸಪ್ತತಿ ...
READ MORE