ಕನ್ನಡದೊಳ್ ಭಾವಿಸಿದ ಜನಪದಂ

Author : ವಸು ಮಳಲಿ

Pages 440

₹ 375.00




Published by: ಚಿಂತನ ಪುಸ್ತಕ
Address: # 1863, 11 ನೇ ಮುಖ್ಯರಸ್ತೆ , 38 ನೇ ಅಡ್ಡ ರಸ್ತೆ, 4 ಟಿ ಬ್ಲಾಕ್ , ಜಯನಗರ , ಬೆಂಗಳೂರು -560041

Synopsys

 ಕೃತಿಯ 30 ಲೇಖನಗಳಲ್ಲಿ ಒಂದೊಂದು ಲೇಖನವೂ ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆಯ ಒಂದೊಂದು ಸವಾಲನ್ನು ಪ್ರತಿನಿಧಿಸುತ್ತದೆ. ಆರಿಸಿಕೊಂಡ ವಿಷಯ, ಸಂಶೋಧಕ ಬಳಸುತ್ತಿರುವ ಆಕರ, ಒಳತೋಟಿಯಲ್ಲಿ ಹರಿಯುವ ಧೋರಣೆ, ಸಂಶೋಧಕನ ಹಿನ್ನೆಲೆ ಎಲ್ಲಕ್ಕೂ ಒಂದು ಅರ್ಥ ಕಾಣಿಸುತ್ತದೆ. ನಾಡಿನ ಜನಪದರ ಚರಿತ್ರೆ ಕಟ್ಟುವ ಸಂಶೋಧಕರಿಗೆ ಕೈ ದೀವಿಗೆಯಾಗಬೇಕೆಂಬ ಮಹದಾಸೆ ಹೊತ್ತ ಸಂಗ್ರಹ ಇದು.
ವಿವಿಧ ವಿದ್ವಾಂಸರಿಂದ ಬರೆಸಿದ ಲೇಖನಗಳನ್ನು ಆರು ಭಾಗಗಳಲ್ಲಿ ವಿಂಗಡಿಸಲಾಗಿದೆ.  

ಸಾಹಿತ್ಯದೊಳಗಣ ಚರಿತ್ರೆ ಎಂಬ ಮೊದಲ ಭಾಗದಲ್ಲಿನ ಲೇಖನಗಳು

*ಕವಿರಾಜ ಮಾರ್ಗದ ಕನ್ನಡದ ಸ್ವರೂಪ - ಎಚ್. ಶಶಿಕಲಾ

*ಶಂಗಂ ತಮಿಳಗಂ ಮತ್ತು 'ಕನ್ನಡದೊಳ್ ಭಾವಿಸಿದ ಜನಪದಂ' ಆರಂಭಿಕ ಇತಿಹಾಸ ಕಾಲದ ಕರ್ನಾಟಕ ಚರಿತ್ರೆಯ ಹೊಸ ಒಳನೋಟಗಳು - ಅಶೋಕ ಶೆಟ್ಟರ್

*ವಿಜಯನಗರ ಜಲಕುಂಡಗಳು ಜಲಕ್ರೀಡೆಗಳು - ಷ. ಶೆಟ್ಟರ್

*ವಾಸ್ತವದ ಒಡಕುಗಳು - ಇತಿಹಾಸದ ತೊಡಕುಗಳು : ರೈತ ಬಂಡಾಯಗಳ ಮಹಾನ್‌ಗಾಥೆ - ಬಾರ್ಕೂರು ಉದಯ

*ಸ್ವಾತಂತ್ರ್ಯ ಪೂರ್ವ ಕನ್ನಡ ಸಾಹಿತ್ಯ ಮತ್ತು ಚರಿತ್ರೆಯಲ್ಲಿ ತೀವ್ರವಾದಿ ಸಂಕೇತಗಳು - ಆರ್. ಡಿ. ಪವಮಾನ

’ಪ್ರಾಕ್ತನ ಶೋಧನ’ ಎಂಬ ಎರಡನೆಯ ಭಾಗದಲ್ಲಿನ ಲೇಖನಗಳು

*ಕರ್ತಾರನ ಕಮ್ಮಟ : ನೇಗಿಲು, ನೀರಾವರಿ ಮತ್ತು ಮೊದಲ ಘಟ್ಟದ ಪಭುತ್ವಗಳು- ಮನು ವಿ. ದೇವದೇವನ್

*'ಗೋಸಾಸದಿಂದ ತುರುಗೋಲ್'ವರೆಗೆ : ಮಧ್ಯಕಾಲೀನ ಕರ್ನಾಟಕದ ಗೋಪಾಲನಾ ಅರ್ಥವ್ಯವಸ್ಥೆಯ ಸ್ಥಿತ್ಯಂತರಗಳು (ವಿಶೇಷವಾಗಿ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ) - ರಾಜರಾಮ್ ಹೆಗ್ಗಡೆ

* ಶಂಕರಗಲ್ಲು ನಾಯಕರು- ಹೊಸ ಓದು - ಕಾವಲ್ಲಮ್ಮ ಆರ್.

*ಹಂಪಿ ವಿಶ್ವ ಪರಂಪರೆಯ ಸ್ಮಾರಕ ಮತ್ತು ಸಂರಕ್ಷಣಾ ತತ್ವಗಳು- ರವಿ ಕೋರಿಶೆಟ್ಟರ್ - ಅನುವಾದ : ಲಕ್ಷ್ಮೀಪತಿ ಸಿ.ಜಿ.

 

’ಹೆಣ್ಣು ಕಂಡ ನೆಲೆಗಳು’ ಎಂಬ ಮೂರನೆಯ ಭಾಗದಲ್ಲಿನ ಲೇಖನಗಳು

*ಕರ್ನಾಟಕದ ಮಹಿಳಾ ಸೂಫಿಗಳು - ರಹಮತ್ ತರೀಕೆರೆ

*ಮಹಿಳಾ ಸಾಹಿತ್ಯದ ಚರಿತ್ರ ರಚನಾ ಕ್ರಮ (ಕನ್ನಡವನ್ನು ಗಮನದಲ್ಲಿಟ್ಟುಕೊಂಡು) - ಉಷಾ ಎಂ.

* ಮಹಿಳೆ ಮತ್ತು ಸಮಾಜ ಸುಧಾರಣೆಯ ವಾಗ್ವಾದಗಳು: ಇಂದಿರಾಬಾಯಿ-ಇಂದಿರಾ ಕಾದಂಬರಿಗಳಲ್ಲಿ ಕಂಡಂತೆ- ಎಂ ಜಮುನ

 

’ಚರಿತ್ರೆ ಕಟ್ಟಿದ ಮೈಸೂರು’ ಎಂಬ ನಾಲ್ಕನೆಯ ಭಾಗದಲ್ಲಿ

* ಸಂಶೋಧನಾ ನೆಲೆಗಳಲ್ಲಿ ಮೈಸೂರು ಚರಿತ್ರೆ- ಅಶ್ವತ್ಥನಾರಾಯಣ (ಬೆಂಗಳೂರು)

*ನವವಸಾಹತುಶಾಹಿತ್ವ ಮತ್ತು ಭಾರತದ ರಾಷ್ಟ್ರೀಯತೆಯ ಚಿಂತನೆಗಳ ಕಥನ - ಹೈದರಾಲಿ ಮತ್ತು ಟೀಪು - ಅಶ್ವತ್ಥನಾರಾಯಣ (ಮೈಸೂರು)

* ಟೀಪು ಸುಲ್ತಾನ : ಆರ್ಥಿಕ ಅನ್ವೇಷಣೆಗಳು ವಾಣಿಜ್ಯ ಸಂಘರ್ಷ ಮತ್ತು ಯುದ್ಧ ನೀತಿ -ಷಡಕ್ಷರಯ್ಯ

* ಮೈಸೂರು ಸಂಸ್ಥಾನದ ಪತ್ರಿಕೆಗಳಲ್ಲಿ ಕರ್ನಾಟಕತ್ವದ ಪರಿಕಲ್ಪನೆ - ಎಂ. ಕುಮಾರಸ್ವಾಮಿ

* ಮೈಸೂರಿನಲ್ಲಿ ಜಾಹಿರಾತು-ಐತಿಹಾಸಿಕ ನೋಟ - ಶೈಲೇಶ್ ರಾಜ್ ಅರಸ್ ಜಿ.ಬಿ.

* ಕಾನೂನು ಪುನರ್ ಪರಿಶೀಲನೆ ಘಟಕವಾಗಿ ಮೇಲ್ಕನೆ- ಎಂ. ಮುನಿರಾಜಪ್ಪ

 

ಹೊಸ ಪ್ರಶ್ನೆಗಳು’ ಎಂಬ ಐದನೆಯ ಭಾಗದಲ್ಲಿನ ಬರೆಹಗಳು

*ಕೊಡಗು ಮತ್ತು ಐಡೆಂಟಿಟಿಯ ಪ್ರಶ್ನೆ : ವಸಾಹತುಷಾಹಿ ಅನುಭವದ ಅವಲೋಕನ - ಲೋಕೇಶ್ ಕೆ.ಎಂ.

* ಐಡೆಂಟಿಟಿ ಮತ್ತು ವಿಮೋಚನೆ: ಭಾರತದಲ್ಲಿ ಪ್ರತ್ಯೇಕ ರಾಷ್ಟ್ರ ಮತ್ತು ರಾಜ್ಯ ಹೋರಾಟಗಳು- ವಿಜಯ್ ಪೂಣಚ್ಚ ತ೦ಬಂಡ

*ಕರ್ನಾಟಕ ದಲಿತ ಚಳುವಳಿ : ಆಯಾಮಗಳು - ಚಂದ್ರಶೇಖರ್‌ ಐಜೂರ್

* ಕರ್ನಾಟಕದಲ್ಲಿ ದಲಿತ ಹಾಗೂ ಹಿಂದುಳಿದ ಜಾತಿಗಳ ಏಕತೆ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಸ್ಕೃತಿಗಳ ಮೂಲಕ ಒಂದು ನೋಟ - ನಟರಾಜ್ ಹುಳಿಯಾರ್

* ಕರ್ನಾಟಕ ಚರಿತ್ರೆಯ ಬರವಣಿಗೆ - ಎಸ್. ಚಂದ್ರಶೇಖರ್

 

’ಕುರಿತೋದದೆಯು ಕಟ್ಟಿದ ಕಥೆ’ ಎಂಬ ಆರನೆಯ ಭಾಗದಲ್ಲಿ

*ಕುಮಾರರಾಮ ಮತ್ತು ಮೌಖಿಕ ಇತಿಹಾಸ- ಪುರುಷೋತ್ತಮ ಬಿಳಿಮಲೆ

* ಶರೀಫರ ಪದಗಳಲ್ಲಿ ವಸಾಹತಿನ ಗ್ರಹಿಕೆಗಳು- ಶಶಿಧರ್. ಎಂ

* ಮಳಲಿ ಗಿಡ್ಡಮ್ಮ - ಚರಿತ್ರೆ ಕಟ್ಟುವ ಸಾಧ್ಯತೆಗಳು - ವಸು ಎಂ.ವಿ.

About the Author

ವಸು ಮಳಲಿ
(07 February 1967)

ಲೇಖಕಿ, ಕವಯಿತ್ರಿ, ಅಂಕಣಕಾರ್ತಿ, ಚಿತ್ರ ನಿರ್ದೇಶಕಿ, ಇತಿಹಾಸ ತಜ್ಞೆ ಹಾಗೂ ಸಂಸ್ಕೃತಿ ಚಿಂತಕಿ ಡಾ.ಎಂ.ವಿ. ವಸು ಆವರು ’ವಸು ಮಳಲಿ’ ಎಂದೇ ಚಿರಪರಿಚಿತರು. ಹಿರಿಯ ಸಾಹಿತಿ ಮಳಲಿ ವಸಂತಕುಮಾರ್ ಅವರ ಪುತ್ರಿ.  1967ರ ಫೆಬ್ರವರಿ 7ರಂದು ಜನಿಸಿದರು. ಖ್ಯಾತ ಫೋಟೋಗ್ರಾಫರ್ ರನ್ನ ಎಂ.ವಿ. ಇವರ ಸಹೋದರ. ವಸು ಮಳಲಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದಿದ್ದ ಅವರು ವಿಶ್ವವಿದ್ಯಾಲಯ ಖೋಖೋ ತಂಡದ ನಾಯಕಿಯೂ ಆಗಿದ್ದರು. ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಅವರು 1998ರಲ್ಲಿ ಬೆಂಗಳೂರು ...

READ MORE

Related Books