ಕನ್ನಡ ರಮಾರಮಣ ಕೃಷ್ಣದೇವರಾಯ ಸೂರ್ಯನಾಥ ಕಾಮತ್ ಅವರ ಐತಿಹಾಸಿಕ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ಕೃಷ್ಣದೇವರಾಯನ ಆಳ್ವಿಕೆಯನ್ನು (೧೫೦೯ - ೧೫೩೦) ಹಾಗು ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಹೇಗೆ ವಿಜಯಗಳ ನಗರವಾಯಿತು ಎಂಬುದನ್ನು ವಸ್ತುವಾಗಿರಿಸಿಕೊಂಡು ಲೇಖಕರು ಈ ಕಾದಂಬರಿಯನ್ನು ಸುಂದರವಾಗಿ ಬರೆದಿದ್ದಾರೆ. ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಮಾಡುತ್ತಾ, ಧರ್ಮ ಮಾರ್ಗಾನುವರ್ತಿಯಾಗಿ ಪ್ರಜೆಗಳಿಗೆ ಹಾದಿತೋರಿಸುತ್ತಾ, ಧರ್ಮದಿಂದ ರಾಜ್ಯಪಾಲಿಸಿ, ನ್ಯಾಯ ಯೋಗ್ಯವಾದ ಕಾರ್ಯಗಳನ್ನು ಸಂಗ್ರಹಿಸಿ,ದಾನಧರ್ಮ, ಯಜ್ಞಯಾಗಾದಿಗಳನ್ನು, ಪ್ರಜಾಹಿತದ ಕಾರ್ಯಗಳನ್ನು ಪ್ರಜೆಗಳಿಗೋಸ್ಕರವೇ ತನ್ನ ಜೀವವನ್ನು ತ್ಯಾಗಮಾಡಿ, ಕನ್ನಡರಾಜ್ಯ ರಮಾರಮಣ, ದಕ್ಷಿಣೋತ್ತರ ಸಮುದ್ರಾಧೀಶ್ವರ, ಯವನರಾಜ್ಯ ಪ್ರತಿಷ್ಠಾಪನಾಚಾರ್ಯ, ಗೋ ಬ್ರಾಹ್ಮಣ ಪ್ರತಿಪಾಲನಾಚಾರ್ಯ, ಹಿಂದೂ ರಾಯ ಸುರತ್ರಾಣ ಎಂಬ ಬಿರುದುಗಳನ್ನು ಪಡೆದ ಶತ ಕದನಗಳ ವೀರ, ಕೃಷ್ಣೆಗೂ ಆಚೆ ವರಾಹ ಧ್ವಜವನ್ನ ಮೆರಸಿದ ವೀರ, ವಿಜಯನಗರ ಸಾಮ್ರಾಜ್ಯವನ್ನು ನಿಜವಾಗಿಯೂ ವಿಜಯದ ರಾಜ್ಯವಾಗಿ ಕಟ್ಟಿದ ಮಹಾ ಪ್ರಚಂಡ ಕೃಷ್ಣದೇವನ ಮರಣದಿಂದ ಇಡೀ ವಿಜಯನಗರ ಸ್ತಬ್ಧವಾಗುತ್ತದೆ*.
©2024 Book Brahma Private Limited.