ಲೇಖಕ ಎನ್.ಎಸ್. ಮಹಂತೇಶ್ ಅವರ ಸಂಶೋಧನಾತ್ಮಕ ಕೃತಿ-ಚಿತ್ರದುರ್ಗ ಕೋಟೆ ಪರಿಸರದ ದೇವಾಲಯಗಳು: ಒಂದು ಸಾಂಸ್ಕೃತಿಕ ಅಧ್ಯಯನ. ಈ ಕೃತಿಯು 2008ರಲ್ಲಿ ಮೊದಲ ಮುದ್ರಣ ಕಂಡಿತ್ತು. ಚಿತ್ರದುರ್ಗದ ಪ್ರಾಚೀನ ಇತಿಹಾಸ, ಪಾಳೆಯಗಾರರ ಇತಿಹಾಸ, ಅಬೇಧ್ಯ ಕೋಟೆ-ಕೊತ್ತಲಗಳು, ದೇವಾಲಯಗಳು, ಶಾಸನಗಳು , ಜಾತ್ರೆ-ಉತ್ಸವ, ನಂಬಿಕೆ-ಆಚರಣೆ ಮುಂತಾದ ಅನೇಕ ಸಂಗತಿಗಳನ್ನು ಕುರಿತಂತೆ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿದ ಕೃತಿ ಇದು. ಅಗತ್ಯವಿರುವೆಡೆ ನಕ್ಷೆಗಳು, ಚಿತ್ರಗಳನ್ನು ಬಳಸುವ ಮೂಲಕ ಕೃತಿಯ ಮಹತ್ವ-ಗಂಭೀರತೆ ಹೆಚ್ಚಿಸಿದೆ.
©2024 Book Brahma Private Limited.