ಹಿರಿಯ ಸಂಶೋಧಕ ಕಪಟರಾಳ ಕೃಷ್ಣರಾಯರು ಸುರಪುರ ಸಂಸ್ಥಾನದ ಬಗ್ಗೆ ವಿವರವಾದ ಸಂಗತಿಗಳನ್ನು ’ಸುರಪುರ ಸಂಸ್ಥಾನದ ಇತಿಹಾಸ’ ಪುಸ್ತಕದಲ್ಲಿ ಒದಗಿಸಿದ್ದಾರೆ. ಸುರಪುರದ ಬಳಿಯ ಹಾಲಗಡಲಿ ಎಂಬಲ್ಲಿ ಜನಿಸಿದ ಕಪಟರಾಳ ಕೃಷ್ಣರಾಯರು ಸುರಪುರದ ರಾಜಮನೆತನದೊಂದಿಗೆ ಸಂಪರ್ಕ ಹೊಂದಿದ್ದರು. ’ಕಪಟರಾಳ್’ ಎಂಬ ಗ್ರಾಮದಿಂದ ಸುರಪುರಕ್ಕೆ ಬಂದು ನೆಲೆಸಿದ ಅವರು ಅರಸು ಮನೆತನದ ದಾಖಲೆಗಳನ್ನ್ನಾನು ಆಧರಿಸಿ ’ಸುರಪುರ ಸಂಸ್ಥಾನದ ಇತಿಹಾಸ’ ರಚಿಸಿದ್ದಾರೆ. ಈ ಪುಸ್ತಕವು ಸುರಪುರದ ಸಂಸ್ಕೃತಿ, ಆಡಳಿತ, ರಾಜಮನೆತನ, ಸಾಹಿತ್ಯ ಕೊಡುಗೆ, ವಂಶ ಪರಂಪರೆಯ ಇತಿಹಾಸಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ಸುರಪುರ ಸಂಸ್ಥಾನದ ಪ್ರಮುಖ ರಾಜಮನೆತನದ ನಾಯಕರುಗಳಾದ ಗಡ್ಡಿ ಪಿಡ್ಡನಾಯಕ, ಹಸರಂಗಿ ಪಾಮನಾಯಕ, ಪೀತಾಂಬರ ಬಹಿರಿ ಪಿಡ್ಡನಾಯಕ, ಇಮ್ಮಡಿ ಪಾಮನಾಯಕ, ಮೊಂಡಗೈ ವೆಂಕಟಪ್ಪನಾಯಕ, ಮುಮ್ಮಡಿ ಪಾಮನಾಯಕ, ಕೃಷ್ಣಪ್ಪ ನಾಯಕ ಇವರುಗಳ ಇತಿಹಾಸವನ್ನು ಸಮಗ್ರವಾಗಿ ಕಪಟರಾಳ ಕೃಷ್ಣರಾಯರು ಕಟ್ಟಿಕೊಟ್ಟಿದ್ದಾರೆ.
ಆಡಳಿತದ ಹಿನ್ನೆಲೆ, ರಾಜಮನೆತನಗಳ ಸಂಬಂಧಗಳು, ಕಲಹ, ನಡೆಸಿದ ಧರ್ಮಕಾರ್ಯಗಳು, ನಾಯಕರುಗಳ ಸಹಾಯ - ಸಹಕಾರ, ಪ್ರಕರಣಗಳು, ಸಮಾರಂಭಗಳು ಇವೆಲ್ಲವನ್ನೂ ಸಂದರ್ಭ ಸಹಿತವಾಗಿ ಕಪಟರಾಳರು ವಿವರಿಸಿದ್ದಾರೆ. ಇದರ ಜೊತೆಗೆ ಸುರಪುರ ಸಂಸ್ಥಾನದ ವಂಶಾವಳಿಯನ್ನು ಸಹ ನೀಡಿದ್ದಾರೆ.
ಕಪಟರಾಳ ಕೃಷ್ಣರಾಯರ ಸಮಗ್ರ ಸಾಹಿತ್ಯ ಮಾಲೆಯ ಮೊದಲ ಸಂಪುಟ ಇದಾಗಿದೆ. ಪ್ರೊ. ಎಂ. ಧ್ರುವಧ್ರುವನಾರಾಯಣ ಅವರು ಸಂಪಾದಿಸಿ ಹೊರತಂದಿದ್ಧಾರೆ.
ಕಪಟರಾಳ ಕೃಷ್ಣರಾಯರು ಸಾಹಿತಿ, ಸಂಶೋಧಕ, ಸ್ವಾತಂತ್ಯ್ರ ಹೋರಾಟಗಾರ ಹಾಗೂ ಸಮಾಜ ಸೇವಕರಾಗಿದ್ದವರು. ಸುರಪುರ ಬಳಿಯ ಹಾಲಗಡಲಿ ಎಂಬ ಹಳ್ಳಿಯಲ್ಲಿ ದಿನಾಂಕ 3, ಡಿಸೆಂಬರ್ 1889 ರಲ್ಲಿ ಜನಿಸಿದರು. ಸುರಪುರದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದ ಕಪಟರಾಳರು ಮಿಡಲ್ ಪರೀಕ್ಷೆಯವರೆಗೂ ಸುರಪುರದಲ್ಲಿಯೇ ಓದಿದರು. ಸರ್ಕಾರಿ ಶಾಲೆಗೆ ಸೇರಿದ ಇವರು ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರು. ಜೊತೆಯಲ್ಲಿ ಪಾರ್ಸಿ ಭಾಷೆಯನ್ನು ಕಲಿತರು. ಮೆಟ್ರಿಕ್ ಅಭ್ಯಾಸಕ್ಕೆ ಹೈದರಾಬಾದ್ ಗೆ ಹೋದರು. ಕ್ರಿ.ಶ. 1910ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪೂರೈಸಿದರು. ಮನೆಪಾಠವನ್ನು ಹೇಳಿ ತಮ್ಮ ವಕೀಲಿ ಪರೀಕ್ಷೆಗೆ ತಯಾರಾದರು. ನಂತರ ಪೂನಾಕ್ಕೆ ತೆರಳಿ ವಕಾಲತ್ ಪರೀಕ್ಷೆಯನ್ನು ...
READ MORE