ದೇವಗಿರಿ

Author : ಪಿ. ಆರ್. ನಾಯ್ಕ್

Pages 240

₹ 250.00




Year of Publication: 2021
Published by: ನಾಗಮ್ಮ ಫೌಂಡೇಷನ್
Address: ನಂ. 462, 1ನೇ \'ಸಿ\' ಮುಖ್ಯರಸ್ತೆ, 4ನೇ ಹಂತ, ಜೆ.ಪಿ ಬೆಂಗಳೂರು -560 078
Phone: 9886081188

Synopsys

'ದೇವಗಿರಿ’ ಪಿ. ಆರ್. ನಾಯ್ಕರ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ: ರಾಮಾಯಣಕ್ಕಿಂತಲೂ ಪೂರ್ವೇತಿಹಾಸವನ್ನು ಹೊಂದಿರುವ ಈ ಕರಾವಳಿ ಪ್ರದೇಶದ ಉಗಮವು ಪರಶುರಾಮಾವತಾರದಲ್ಲಿ ಉದ್ಭವಿಸಿದ ಬಗೆಗೆ ವಿವರಗಳಿವೆ. ಸಾವಿರಾರು ವರ್ಷಗಳ ಅವಧಿಯಲ್ಲಿ, ಯುಗ-ಯುಗಗಳೇ ಬದಲಾವಣೆಗೊಂಡರೂ, ಅಚಲವಾಗಿ ನಿಂತಿರುವ ದೇವಗಿರಿಯ ಗುಡ್ಡದ ಕುರಿತು "ಆಧುನಿಕ ಚಿಂತನದ ಮನಸೊಂದು" ಕ್ಷೇತ್ರಾನ್ವೇಷಣೆಮಾಡಿ ದಾಖಲಿಸಿರುವದು ಒಂದುಪವಾಡದಂತಿದೆ. ಇದನ್ನು 'ಸ್ಥಳಪುರಾಣ" ವೆಂದು ಪ್ರಾಚೀನ ಭಾಷಾವ್ಯವಸ್ಥೆಯಲ್ಲಿ ಕರೆದರೆ, ಆಧುನಿಕವಾಗಿ “ಕ್ಷೇತ್ರಪರಿಚಯ'ದ ಹಿನ್ನೆಲೆಯಲ್ಲಿ-ಅದಕ್ಕಿಂತ ಹೆಚ್ಚಾಗಿ, ಅತಿಪರಿಚಯಾತ್ ಅವಜ್ಞಾ ಎನ್ನುವಂತೆ, ನಮ್ಮ ಎದುರಿಗೇ ಇರುವ ಮಹತ್ವವನ್ನೇ ಮರೆತು ಬದುಕುತ್ತಿರುವ ಇಂದಿನ ಸಮಾಜ ವ್ಯವಸ್ಥೆಯಲ್ಲಿ ಶ್ರೀ ಪಿ. ಆರ್. ನಾಯ್ಕರು 'ಸಮಾಜದಮುಂದೆ ಒಂದು ಕನ್ನಡಿ'ಯನ್ನು ಇಟ್ಟಿದ್ದಾರೆ.

Related Books