ಮೈಸೂರೆಂಬ ಪ್ರವಾಸಿ ಸ್ವರ್ಗ-ಈ ಕೃತಿಯನ್ನು ಲೇಖಕ ಅಂಶ ಪ್ರಸನ್ನಕುಮಾರ ರಚಿಸಿದ್ದು, ಐತಿಹಾಸಿಕವಾಗಿ ಪ್ರಸಿದ್ಧ ಹಾಗೂ ಪ್ರವಾಸಿ ತಾಣ ಮೈಸೂರಿನ ಸಂಪೂರ್ಣ ಚಿತ್ರಣವನ್ನು ಒಳಗೊಂಡ ಕೃತಿ. ಮೈಸೂರು ಅರಮನೆ, ಶ್ರೀರಂಗಪಟ್ಟಣ, ಫಿಲೋಮಿನಾ ಚರ್ಚ್, ಚಾಮುಂಡೇಶ್ವರಿ ದೇವಸ್ಥಾನ ಹೀಗೆ ಪ್ರವಾಸ ಯೋಗ್ಯವಾದ ತಾಣಗಳ ಕಿರುಪರಿಚಯವನ್ನೂ ಈ ಕೃತಿ ಒಳಗೊಂಡಿದೆ.
ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...
READ MORE