ಹಾವೇರಿ ತಾಲ್ಲೂಕಾ ದರ್ಶನ -ಈ ಕೃತಿಯು ಹಾವೇರಿ ತಾಲ್ಲೂಕನ್ನು ವಿವಿಧ ಆಯಾಮಗಳಿಂದ ಪರಿಚಯಿಸುತ್ತದೆ. ತಾಲೂಕು ವ್ಯಾಪ್ತಿಯ ಇತಿಹಾಸ, ಸಂಸ್ಕೃತಿ-ಸಾಹಿತ್ಯ-ಕಲೆ-ವ್ಯಾಪಾರ-ಮಾರುಕಟ್ಟೆ ಹೀಗೆ ಸೌಲಭ್ಯ ಹಾಗೂ ಮಿತಿಗಳೆರಡನ್ನೂ ಸೂಚಿಸಿ, ಭವಿಷ್ಯದಲ್ಲಿ ಅವುಗಳ ಅಭಿವೃದ್ಧಿ-ವಿಕಾಸವನ್ನು ಆಶಿಸುತ್ತದೆ. ಹಾವೇರಿ ತಾಲೂಕಿನ ಸಮಗ್ರ ಪಕ್ಷಿನೋಟವನ್ನು ನೀಡುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ.
ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ. ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ. ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...
READ MORE