SSLC ನಂತರ ಮುಂದೇನು ?

Author : ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)

Pages 148

₹ 100.00




Year of Publication: 2014
Published by: ಗೈಡ್ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು, 560 004
Phone: 080 26676427

Synopsys

ಲೇಖಕ ಗಿರೀಶ್ ತಾಳಿಕಟ್ಟೆ ಅವರ ‘SSLC ನಂತರ ಮುಂದೇನು ?’ ಪುಸ್ತಕವು 2012ರಲ್ಲಿ ಮೊದಲ ಮುದ್ರಣವನ್ನು ಕಂಡು, 2014 ಎರಡನೆ ಮುದ್ರಣವನ್ನು ಕಂಡಿದೆ. ಈ ಪುಸ್ತಕದಲ್ಲಿ SSLC ನಂತರ ಮುಂದೇನು ಎಂಬ ಗೊಂದಲದಲ್ಲಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಹಾಗೂ ಪೋಷಕರ ಉತ್ತಮ ಮಾಹಿತಿಗಳನ್ನು ನೀಡುವಂತಿದೆ. ಪುಸ್ತಕದ ಪರಿವಿಡಿಯಲ್ಲಿ ಕೆರಿಯರ್ ಪ್ಲ್ಯಾನಿಂಗ್, ಕಲಿಕೆ ಮತ್ತು ಆಯ್ಕೆ, ಬುದ್ಧಿವಂತಿಕೆ ಮತ್ತು ನಾವು, ಎಸ್.ಎಸ್.ಎಲ್.ಸಿ ನಂತರದ ಕೋರ್ಸ್ ಚಾರ್ಟ್, ಪದವಿ ಪೂರ್ವ ಶಿಕ್ಷಣ, ಸಾಮಾನ್ಯ ಲಿಖಿತ ಪರೀಕ್ಷೆ, ಆನ್ ಲೈನ್ ಪಿಯುಸಿ ಪ್ರವೇಶ, ಇಂಟೀರಿಯರ್‍ ಡಿಸೈನಿಂಗ್, ಪೈರ್‍ ಟೆಕ್ನಾಲಜಿಕಂಪ್ಯೂಟರ್ ಕೋರ್ಸ್‌ಗಳು ಹೀಗೆ ಹತ್ತು ಹಲವು ಶೀರ್ಷಿಕೆಗಳಿವೆ.

About the Author

ಗಿರೀಶ್ ತಾಳಿಕಟ್ಟೆ (ಗಿರೀಶ್ ಎಂ.ಬಿ)
(13 November 1984)

ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಕಾವಲು ಇವರ ಹುಟ್ಟೂರು. ಉದ್ಯೋಗ ಸ್ಫೂರ್ತಿ, ಜಾಬ್‌ನ್ಯೂಸ್, ಗೌರಿ ಲಂಕೇಶ್ ವಾರಪತ್ರಿಕೆ ಮೊದಲಾದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಆರಕ್ಷಕ ಲಹರಿ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ), ಜೆನ್ ಕಥೆಗಳು, ...

READ MORE

Related Books