ಜನರು ಯೋಚಿಸುವುದೇ ಹಾಗೆ, ನೀವು ನಿಮ್ಮ ಬದುಕನ್ನು ಬದಲಿಸಲು ಬಯಸಿದರೆ, ಬಹುದೊಡ್ಡ ರೀತಿಯಲ್ಲಿ ಯೋಚಿಸಬೇಕಂತ. ಆದರೆ ಅಭ್ಯಾಸಗಳ ಕುರಿತಂತೆ ವಿಶೇಷಜ್ಞರೂ, ಜಗತ್ತಿನಾದ್ಯಂತ ಖ್ಯಾತನಾಮರೂ ಆದ ಜೇಮ್ಸ್ ಕ್ಲಿಯರ್ ಬೇರೊಂದು ವಿಧಾನವನ್ನು ಕಂಡುಹಿಡಿದಿದ್ದಾರೆ. ಅವರ ಪ್ರಕಾರ ವಾಸ್ತವಿಕ ಬದಲಾವಣೆ ಸಹಸ್ರಾರು ಚಿಕ್ಕ ಚಿಕ್ಕ ನಿರ್ಣಯಗಳ ಸಂಯುಕ್ತ ಪ್ರಭಾವದಿಂದ ನಡೆಯುತ್ತದೆ. ಚಿಕ್ಕ ನಿರ್ಣಯಗಳಲ್ಲಿ ಪ್ರತಿನಿತ್ಯ ಎರಡು ಪುಶ್-ಅಪ್ ಮಾಡುವುದು, ಐದು ನಿಮಿಷ ಮುಂಚಿತವಾಗಿ ಏಳುವುದು, ಒಂದು ಪುಟದಷ್ಟು ಹೆಚ್ಚು ಓದುವಂತಹ ಉದಾಹರಣೆಗಳನ್ನು ಅವರು ನೀಡುತ್ತಾರೆ. ಅದನ್ನೇ ಅವರು 'ಅಟಾಮಿಕ್ ಹ್ಯಾಬಿಟ್ಸ್' ಎಂದು ಕರೆಯುತ್ತಾರೆ.
©2024 Book Brahma Private Limited.