ಲೇಖಕ ಬೆ.ಕಾ. ಮೂರ್ತೀಶ್ವರಯ್ಯ ಅವರ ಅನುವಾದಿತ ಕೃತಿ-ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ. ಜೇಮ್ಸ್ ಅಲೆನ್ ಅವರು ಬರೆದ ಇಂಗ್ಲಿಷ್ ಕೃತಿಯನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದು, ಮನಸ್ಸಿನಂತೆ ಮಹಾದೇವ ಎಂಬ ಗಾದೆ ಮಾತಿನಂತೆ ಒಬ್ಬ ವ್ಯಕ್ತಿಯ ಅರಿವು ಆತನ ಇಡೀ ವ್ಯಕ್ತಿತ್ವದ ಸೂಚಕವಾಗುತ್ತದೆ ಎಂಬುದನ್ನು ವಿವರಿಸಿದ ಕೃತಿ. ಆದ್ದರಿಂದ ಅರಿವು ಹೆಚ್ಚಿಸಿಕೊಳ್ಳುವ ಮೂಲಕ ವ್ಯಕ್ತಿತ್ವದ ಆಳ-ವಿಸ್ತಾರಗಳನ್ನು ವಿಕಾಸಗೊಳಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಕೃತಿಯಲ್ಲಿ ನೀಡಲಾಗಿದೆ.
ಬೆ. ಕಾ. ಮೂರ್ತೀಶ್ವರಯ್ಯ ಅವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಬರಗಾಹರರು. ಸಾಮಾಜಿಕ, ರಾಜಕೀಯ, ಆರ್ಥಿಕ, ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಇವರ 100ಕ್ಕೂ ಹೆಚ್ಚು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ ಕನ್ನಡ ಪ್ರಭ, ಮುಂಗಾರು ಸಂಯುಕ್ತ ಕರ್ನಾಟಕ, ಉದಯವಾಣಿ, ಪ್ರಜಾಮತ, ಜನಪದ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ತಮ್ಮ ಪತ್ರಿಕಾ ಲೇಖನಗಳ ಪೈಕಿ ಆಯ್ದ ಲೇಖನಗಳನ್ನು ಅಭಿವ್ಯಕ್ತಿ ಸಂವೇದನೆ ಇತ್ಯಾದಿ, ಅರ್ಥ ಮತ್ತು ವ್ಯಾಪ್ತಿ', 'ಜನತೆ, ಸಮಾಜ ಮತ್ತು ಕಾನೂನು ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಇವರ ಪ್ರಕಟವಾದ ಪುಸ್ತಕಗಳಲ್ಲಿ ’ಅಭಿವ್ಯಕ್ತಿ, ಸಂವೇದನೆ ಇತ್ಯಾದಿ (1985), "ಅರ್ಥ ಮತ್ತು ವ್ಯಾಪ್ತಿ ...
READ MORE