ಮನುಷ್ಯ ಮನಸ್ಸು ಎಂಬುದೆ ಹಾಗೆ. ಅದು ಯಾರ ತರ್ಕಕ್ಕೂ ನಿಲುಕ್ಕದ್ದು. ಆ ಮನಸ್ಸುಗಳೊಳಗೆ ಯಾವುದಾದರೊಂದು ಸಂಘರ್ಷ ನಡೆಯುತ್ತಲೇ ಇರುತ್ತದೆ. ಈ ಮನುಷ್ಯನ ಮನಸ್ಸು ಯಾರ ಹಾಗು ಯಾವುದರ ನಿಯಂತ್ರಣಕ್ಕೂ ಸಿಗುವುದಿಲ್ಲ. ಹೀಗೆ ಮನುಷ್ಯನ ಮನಸ್ಸು ಹಾಗೂ ಅದರ ಸ್ವಭಾವಗಳನ್ನು ಲೇಖಕರಾದ ಗಿರಿಮನೆ ಶ್ಯಮರಾವ್ ಪ್ರಸ್ತುತ ಕೃತಿಯಲ್ಲಿ ವಿವರಿಸುತ್ತಾರೆ. ತರ್ಕವಿಲ್ಲದೆ ಮಾಡುವ ಕಾರ್ಯ ಹೆಡಿಗೆಯಲ್ಲಿ ನೀರು ತಂದಂತೆ, ತರ್ಕ ಬದ್ಧವಾಗಿ ಮಾಡುವ ಕೆಲಸ ಹೆಡಿಗೆಯಲ್ಲಿ ಹಣ್ಣು ತಂದಂತೆ, ಅಂದರೆ ಒಬ್ಬ ಮನುಷ್ಯ ಎಂತಹ ಕೆಲಸಗಳನ್ನು ಮಡುತ್ತಾನೆ ಎಂಬುದರ ಮೇಲೆ ಅವನ ಮಹತ್ವ, ಇತರರು ಅವನಿಗೆ ಕೊಡುವ ಬೆಲೆ ಎಲ್ಲವೂ ನಿರ್ಧಾರವಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಲೇಖಕರು ಮನುಷ್ಯನ ಬುದ್ಧಿಯನ್ನು ಅಳತೆಗೋಲಿನಿಂದ ಅಳತೆ ಮಾಡಲು ಸಾಧ್ಯವಿಲ್ಲ, ಹಾಗಂತ ಆ ಬುದ್ಧಿ ತನ್ನ ಇರುವಿಕೆಯನ್ನು ತೋರಿಸದೆ ಇರುವುದಿಲ್ಲ, ಸದಾ ಏನಾದರೊಂದು ಕೆಲಸದಿಂದ ಎಲ್ಲರಿಗೂ ತನ್ನನ್ನು ಪರಿಚಯಿಸಿಕೊಳ್ಳುತಿರುತ್ತದೆ ಎನ್ನುತ್ತಾರೆ. ಹೀಗಾಗಿ ಒಬ್ಬ ವ್ಯಕ್ತಿ ಮನೆಯ ಜವಬ್ದಾರಿಯನ್ನು ಹೊತ್ತು, ಸಜ್ಜನರ ಸಹವಾಸ ಮಾಡಿಕೊಂಡಿದ್ದರೆ ಮನೆ, ಸಮಾಜ ಎಲ್ಲರೂ ಆತನನ್ನು ಗೌರವದಿಂದ ಕಣುತ್ತಾರೆ ಇದಕ್ಕೆ ವಿರುದ್ಧವಾಗಿ ದುಷ್ಚಟಗಳಿಂದ ನಡೆದುಕೊಂಡರೆ ಮನೆಯವರ ಮನಸ್ಸಿನಲ್ಲಿ ಎಂದು ಆತನಿಗೆ ಜಾಗವಿರಲ್ಲ. ಅಂತಹ ವ್ಯಕ್ತಿ ಎಂದು ಮನೆಯೊಡೆಯನಾಗಲಾರ ಎಂದು ಗಿರಿಮನೆಯವರು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಹೀಗೆ ಈ ಆಧುನಿಕ ಸಮಜದಲ್ಲಿ ಒಬ್ಬ ವ್ಯಕ್ತಿ ಆದರ್ಶನಾಗಬೆಕದರೆ ಎಲ್ಲರ ಗೌರವಕ್ಕೆ ಅರ್ಹನಾಗಬೇಕಾದರೆ ಅವನು ಎಂತಹ ಸ್ವಭಾವ ಹಾಗೂ ಜವಾಬ್ದಾರಿಗಳನ್ನು ರೂಢಿಸಿಕೊಳ್ಳಬೇಕು ಎಂದು ಲೇಖಕರು ಇಲ್ಲಿ ತಿಳಿಸಿದ್ದಾರೆ, ಅಲ್ಲದೆ ಭಾಗ 1,2,3 ಎಂದು ಸತತ ಮೂರು ಅವತರಣಿಕೆಯಲ್ಲಿ ಮನುಷ್ಯನ ಮನಸ್ಸು ಮತ್ತು ಸ್ವಭಾವಗಳು ಕೃತಿ ಪ್ರಕಟವಾಗಿದ್ದು ಹಲವಾರು ಉಪಯುಕ್ತ ಲೇಖನಗಳನ್ನು ಒಳಗೊಂಡಿದೆ.
©2024 Book Brahma Private Limited.