ಅಧ್ಯಾಪಕರು ಯಾರು? ಅವರು ಏನನ್ನು ಮಾಡುತ್ತಾರೆ? ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸದ ಉದ್ದೀಶ್ಯವನ್ನಷ್ಟೇ ವಿಚಾರಣೆಗೆ ಸೀಮಿತಗೊಳಿಸದೆ, ಅಧ್ಯಾಪಕರು-ವಿದ್ಯಾರ್ಥಿಗಳ ಮಧ್ಯೆ ಇರಬೇಕಾದ ಬಹುಮುಖ ಸಂಬಂಧದತ್ತ ತೀಕ್ಷ್ಣ ದೃಷ್ಟಿ ಹರಿಸುವುದು ಕೃತಿಯ ವೈಶಿಷ್ಟ್ಯ.
ಅಧ್ಯಾಪಕ ವೃತ್ತಿಯ ವಿವಿಧ ಅಂಶಗಳನ್ನು ಕೃತಿಯಲ್ಲಿ ವಿವರಿಸಲಾಗಿದೆ. ಶಿಕ್ಷಕರ ಕರ್ತವ್ಯ, ಅವರು ಏನನ್ನು ಮಾಡಬೇಕು ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸದ ಉದ್ದೇಶನ್ನು ವಿವರಿಸಲಾಗಿದೆ. ಬೋಧಕರಿಗೆ ಉಪಯುಕ್ತ ಕೃತಿ.
ಲೇಖಕ ವಿ.ಕೆ.ತಾಳಿತ್ತಾಯ ಅವರು (ಕೃಷ್ಣಮೂರ್ತಿ ತಾಳಿತ್ತಾಯ) ಕಾಸರಗೋಡು ತಾಲೂಕಿನ ಮಂಜೇಶ್ವರ ಬಳಿಯ ವರ್ಕಾಡಿಯವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಡೆದು ಉನ್ನತ ವ್ಯಾಸಂಗವನ್ನು ಮಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಮಾಡಿದರು. ವಾಣಿಜ್ಯ, ಸಮಾಜ ಸೇವೆ ಮತ್ತು ಮಾನವ ಸಂಪನ್ಮೂಲಗಳಲ್ಲಿ ವಿದ್ಯಾರ್ಹತೆಗಳನ್ನು ಹೊಂದಿದ್ದು, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಭಾರತ್ ಎಲೆಕ್ಟ್ರಾನಿಕ್ಸ್, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಮಂಗಳೂರಿನ ಬೃಹತ್ ಮೋಂಬತ್ತಿ ಕಾರ್ಖಾನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಮಂಗಳೂರಿನಲ್ಲಿ ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಯ ಸದಸ್ಯರು. ಕೃತಿಗಳು: ನಾನೊಂದು ಪ್ರಶ್ನೆ ...
READ MORE