ನುಡಿ ನಡೆ

Author : ಗಿರಿಮನೆ ಶ್ಯಾಮರಾವ್

Pages 160

₹ 120.00




Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsys

ಅನಾದಿ ಕಾಲದಿಂದಲೂ ಸಮಾಜದಲ್ಲಿ ಒಂದು ಮಾತು ಪ್ರಚಲಿತವಾಗಿದೆ. ಅದು ‘ಮುತ್ತು ಒಡೆದರೆ ಹೋಯಿತು, ಮಾತು ಆಡಿದರೆ ಹೋಯಿತು’ ಎಂದು. ಹೌದು, ಮನುಷ್ಯನ ಪ್ರತೀ ಮಾತಿಗೂ ಒಂದು ತೂಕವಿದೆ. ನಾವು ಆಡುವ ಪ್ರತೀ ಮಾತಿನ ಬಗ್ಗೆಯು ವಿಮರ್ಶಿಸುವ ಜನರಿದ್ದಾರೆ. ಅದೆಲ್ಲಕ್ಕಿಂತಾ ಹೆಚ್ಚಾಗಿ ನಾವು ಎಂತಹಾ ಮತುಗಳನ್ನು ಆಡುತ್ತೇವೆ ಎಂಬುದರ ಮೇಲೆ ಈ ಸಮಾಜದಲ್ಲಿ ನಮ್ಮ ಸ್ಥಾನ ಏನು, ನಮನ್ನು ಸಮಾಜ ಹೇಗೆ ಗೌರವಿಸುತ್ತದೆ ಎಂಬುದು ನಿರ್ಧಾರವಾಗುತ್ತದೆ. ನಾವು ಆಡುವ ಮಾತು ನಮ್ಮ ವ್ಯಕ್ತಿತ್ವಕ್ಕೊಂದು ತೂಕ ತಂದುಕೊಡುತ್ತದೆ. ಈ ಹಿನ್ನಲೆಯಲ್ಲಿ ಮನುಷ್ಯನ ನಡೆ ಹೇಗಿರಬೇಕು ಎಂಬುದರ ಕುರಿತು ಗಿರಿಮನೆ ಶ್ಯಾಮರಾವ್ ಬರೆದ ಕೃತಿಯೇ ‘ನುಡಿ ನಡೆ’. ಮನುಷ್ಯನ ರೀತಿ-ರಿವಾಜು ಮಾತು, ವಿಚಾರಗಳ ಕುರಿತಾದ, ಕೇವಲ ನುಡಿಮುತ್ತುಗಳೇ ಇರುವ ಈ ಪುಸ್ತಕ ಲೇಖಕರ ಅದ್ಭುತ ಪರಿಕಲ್ಪನೆ ಎನ್ನಬಹುದು. ಗಿರಿಮನೆಯವರ ವ್ಯಕ್ತಿತ್ವ ವಿಕಸನದ ಕೃತಿಗಳಲ್ಲಿ ಕಡೆಯದಾಗಿ ಹೊರಬಂದ ಈ ಕೃತಿ ಕೇವಲ ನುಡಿಮುತ್ತುಗಳಿಂದಲೇ ತುಂಬಿರುವ ದೊಡ್ಡ ಸಂಗ್ರಹ. ಎರಡು ಮೂರು ಸಾಲುಗಳ ನುಡಿಮತ್ತುಗಳಲ್ಲಿ ಒಬ್ಬ ಮನುಷ್ಯನ ಸಂಪೂರ್ಣ ನಡವಳಿಕೆ ಹೇಗಿರಬೇಕು ಎಂಬುದನು ತಿಳಿಸಿದ್ದಾರೆ. ಮಾನವೀಯತೆ, ಹಿರಿಯರನ್ನು ಗೌರವಿಸುವುದು, ಅತಿಥಿ ಸತ್ಕಾರ, ಓರ್ವ ವ್ಯಕ್ತಿ ತನಗಿಂತ ಕಿರಿಯರ ಜೊತೆ ಹೇಗೆ ನಡೆದುಕೊಳ್ಳಬೇಕು, ಹಿರಿಯರ ಜೊತೆ ಹೇಗೆ ನಡೆದುಕೊಳ್ಳಬೇಕು, ಸಮಾನ ವಯಸ್ಕರೊಟ್ಟಿಗೆ ಯಾವ ರೀತಿ ವರ್ತಿಸಬೇಕು, ಇತರೆ ಮಹಿಳೆಯರೊಂದಿಗೆ ಹೇಗ ವರ್ತಿಸಬೇಕು ಎಂದು ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಸಂದರ್ಭಾನುಸಾರ ಎಲ್ಲಿ ಯಾವಾಗ ಹೇಗೆ ನಡೆದುಕೊಳ್ಳಬೆಕು, ಹೇಗೆ ಮಾತನಾಡಬೇಕು, ಒಟ್ಟಾರೆ ಸಮಾಜದ ಗೌರವಕ್ಕೆ ಪಾತ್ರನಾಗಬೇಕಾದರೆ ಒಬ್ಬ ವ್ಯಕ್ತಿಯ ನಡೆ ಹೇಗಿರಬೇಕು ಮತ್ತು ಯಾವ ರೀತಿ ಯೋಗ್ಯವಾದ, ಅರ್ಹವಾದ ಮಾತುಗಳನ್ನಾಡಬೇಕು(ನುಡಿ)ಸ ಎಂಬುದರ ಕುರಿತು ಪ್ರಸ್ತುತ ಕೃತಿಯಲ್ಲಿ ಕೇವಲ ನುಡಿಮುತ್ತುಗಳ ಸಂಗ್ರಹದಿಂದಲೇ ಬಹಳ ಸರಳವಾಗಿ ತಿಳಿಸುವ ಪ್ರಯತ್ನವನ್ನು ಗಿರಿಮನೆ ಶ್ಯಾಮರಾವ್ ಮಾಡಿದ್ದಾರೆ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books