ಗೆಲುವಿನ ಹಾದಿಯಲ್ಲಿ ಪ್ರಾಮಾಣಿಕತೆಯೇ ನಮ್ಮ ಬಲವಾಗುತ್ತದೆ ಎನ್ನುತ್ತರೆ ಕೆ. ಶ್ರೀನಿವಾಸ ರೆಡ್ಡಿ ಅವರ ‘ಅಂತರಂಗ’. ಗೆಲುವಿನ ದಾರಿಯೆಂದು ಯಾವುದೂ ನಿರ್ದಿಷ್ಟವಾಗಿಲ್ಲ. ನಾವು ತೀವ್ರತರದ ಆಕಾಂಕ್ಷೆಯಿಂದ ಮಾಡುವ ಎಲ್ಲ ಪ್ರಯತ್ನಗಳೂ ನಮಗೆ ಗೆಲುವಿನ ದಾರಿಯನ್ನು ತೆರೆಸುತ್ತವೆ. ಇಲ್ಲಿಯೂ ನಮ್ಮ ಪ್ರಾಮಾಣಿಕತೆಯೇ ಮುಖ್ಯವಾಗಿ ನಮಗೆ ಬಲವಾಗುತ್ತದೆ. ಒಂದು ವೇಳೆ ನಾವು ಮಾಡುತ್ತಿರುವುದು ನಮಗೆ ಸಮಾಧಾನವನ್ನು ತಂದರೆ, ನಾವು ಮಾಡುತ್ತಿರುವುದು ಸರಿಯೆಂದು ನಮಗನ್ನಿಸಿದರೆ ಇದರಿಂದ ಯಾರಿಗೂ ತೊಂದರೆಯಾಗದಿದ್ದರೆ ನಾವು ನಮ್ಮ ದಾರಿಯಲ್ಲಿ ಮುಂದುವರೆಯಬಹುದು. ಇನ್ನು ನಮ್ಮ ಪ್ರಯತ್ನ ಹಾಗೂ ಪರಿಶ್ರಮಗಳು ಅರ್ಹತೆಗೆ ತಕ್ಕಂತೆ ತಮ್ಮ ಮೌಲ್ಯಕ್ಕೆ ತಕ್ಕಂತೆ ದಾಖಲಾಗುತ್ತವೆ. ಸಂಚಿತವಾಗುತ್ತದೆ. ಇದನ್ನು ಯಾರು ಗಮನಿಸಲಿ ಬಿಡಲಿ ಇದಕ್ಕೆ ತಕ್ಕ ಪ್ರತಿಫಲಗಳು ನಮಗೆ ಸಿಗಲಿವೆ. ಕೆಲವೊಮ್ಮೆ ಪ್ರಾಮಾಣಿಕ ಪ್ರಯತ್ನದಲ್ಲದ್ದಕ್ಕೂ ಪ್ರಾಮಾಣಿಕ ಪರಿಶ್ರಮವಲ್ಲದಕ್ಕೂ ಮಾನ್ಯತೆ ಸಿಗುವುದನ್ನು ಕಾಣುತ್ತೇವೆ. ಆದರೆ ಇದು ಮರೀಚಿಕೆಯಂತೆ ಆಕ್ಷಣಕ್ಕಷ್ಟೇ ಸತ್ಯ ದಂತೆ ಕಾಣುವ ಆದರೆ ಹತ್ತಿರ ಬಂದಂತೆ ಕಾಣೆಯಾಗುವ ಪ್ರಕ್ರಿಯೆ ಈ ಕೃತಿಯಲ್ಲಿ ಮೂಡಿಬಂದಿದೆ.
©2025 Book Brahma Private Limited.