ಮುಂಜಾವಿನಿಂದ ರಾತ್ರಿ ಮಲಗುವವರೆಗೂ ಜೀವನ ಜಂಜಾಟದಲ್ಲಿ ಮುಳುಗುವ ಜನರು ಒಮ್ಮೊಮ್ಮೆ ಕೇಳುವ ಪ್ರಶ್ನೆ ಲೈಫ್‌ನಲ್ಲಿ ಏನಿದೆ ಸಾರ್?. ಈ ಪ್ರಶ್ನೆ ಎಲ್ಲವೂ ಇದೆ ಎನ್ನುವ ಲೇಖಕರು ಆ ಎಲ್ಲವುಗಳಲ್ಲಿ ಕೆಲವನ್ನು ಚರ್ಚಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಜೀವನವೆಂದರೆ ಸುಖ ದುಃಖಗಳ ಆಗರ ಎನ್ನುವ ಲೇಖಕರು ಸ್ಪೂರ್ತಿ ನೀಡುವಂತಹ ನನಸಾದ ಕನಸುಗಳ ಬಗ್ಗೆ ವಿವರಿಸುತ್ತಾ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಎಲ್ಲವನ್ನು ಖುಷಿಯಿಂದ ನೋಡುವುದು ಹೇಗೆ? ಸಮಸ್ಯೆಗಳನ್ನು ಸವಾಲುಗಳಾಗಿ ಏಕೆ ಸ್ವೀಕರಿಸಬೇಕು ಎಂಬೆಲ್ಲಾ ಮಾಹಿತಿ ಈ ಕೃತಿ ಓದಿದಾಗ ಸಿಗುತ್ತದೆ.
ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ. ಬರೆದ ಯಾವುದೊ ಒಂದು ಸಾಲು ಓದುವ ಯಾರದೊ ಎದೆಯೊಳಗೆ ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ. ಕಥೆ ಇವರ ಇಷ್ಟದ ...
READ MORE