ಓ ಬದುಕೇ ನೀನೆಷ್ಟು ಸೊಗಸು

Author : ಯತಿರಾಜ್‍ ವೀರಾಂಬುಧಿ

Pages 120

₹ 134.00




Year of Publication: 2024
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

`ಓ ಬದುಕೇ ನೀನೆಷ್ಟು ಸೊಗಸು’ ಯತಿರಾಜ್ ವೀರಾಂಬುಧಿ ಅವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಮೂಲ ಕೃತಿಯಾಗಿದೆ. ವ್ಯಕ್ತಿತ್ವ ವಿಕಸನ ವಿಚಾರಗಳನ್ನೊಳಗೊಂಡಿದೆ. ಕೃತಿಯ ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ; ಶಾಂತಿ, ತೃಪ್ತಿ ಮತ್ತು ಆನಂದ. ನಾವು ಜೀವನದಲ್ಲಿ ಹೇಗಿರಬೇಕು, ಹೇಗಿರಬಾರದು ಮತ್ತು ಹೇಗಿರಬಹುದು- ಈ ವಿಷಯಗಳ ಬಗ್ಗೆ ಓದುಗರನ್ನು ನೇರವಾಗಿ ಮಾತನಾಡಿಸುತ್ತಾ, ಗುರುಗಳು ಶಿಷ್ಯರಿಗೆ ಹೇಳುವಂತೆ ತಿಳಿಯಾದ ಭಾಷೆಯಲ್ಲಿ ವಿವರಿಸುತ್ತಾರೆ ಡಾ. ಯಂಡಮೂರಿ. ಮಕ್ಕಳಿಗೆ ತಾಯಿ ತಂದೆಯರ ಹಣ, ಪ್ರೀತಿ ಮಾತ್ರ ಸಾಲದು. ಮಕ್ಕಳ ಶಿಕ್ಷಣದಲ್ಲಿ ತಾಯಿತಂದೆಯರು ತೊಡಗಿಸಿಕೊಳ್ಳಬೇಕೆಂಬುದು ಯಂಡಮೂರಿಯವರ ಆಶಯ. ಕೆಲವೊಮ್ಮೆ ಓದುಗರನ್ನು ನೇರವಾಗಿ ಮಾತಾಡಿಸುವಂತೆ ಬರೆದಿರುವ, ಬದುಕಿನ ಸೊಗಸನ್ನು ವಿವರಿಸಿರುವ ವಿಶಿಷ್ಟ ಲೇಖನ ಮಾಲೆಯೇ ಓ ಬದುಕೇ… ನೀನೆಷ್ಟು ಸೊಗಸು..!

About the Author

ಯತಿರಾಜ್‍ ವೀರಾಂಬುಧಿ
(11 August 1957)

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...

READ MORE

Related Books