ಈ ಪುಸ್ತಕವು ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಮಾನವ ಸಂಪನ್ಮೂಲ ಅದರಲ್ಲೂ ಕಾರ್ಮಿಕ / ಕೈಗಾರಿಕಾ ಬಾಂಧವ್ಯಗಳ ನಿರ್ವಹಣೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳು ಹೊರಬಂದಿದ್ದರೂ ಪ್ರಸ್ತುತ ಸನ್ನಿವೇಶಗಳಲ್ಲಿ, ಬದಲಾದ ಪರಿಸರದಲ್ಲಿ ಕಾರ್ಮಿಕ ಬಾಂಧವ್ಯಗಳ ವಸ್ತುನಿಷ್ಠ ವಿವರಣೆಯನ್ನು ಒಳಗೊಂಡಂತಹ ಪ್ರಾಯೋಗಿಕ ಕೈಪಿಡಿಯನ್ನು ತಮ್ಮ ಅನುಭವದಲ್ಲಿ ಅಳವಡಿಸಿಕೊಂಡು ಯಶಸ್ವಿ ತಂತ್ರಗಳೊಂದಿಗೆ ಹೊರತಂದಿದ್ದಾರೆ. ಮಾಲೀಕರ ಮತ್ತು ಆಡಳಿತ ವರ್ಗದ ದೃಷ್ಟಿಕೋನದಲ್ಲಿ ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆಯ ಉದ್ದೇಶಗಳು ಕಡಿಮೆ ವೆಚ್ಚಗಳೊಂದಿಗೆ ಹೆಚ್ಚು ಉತ್ಪಾದನೆಯನ್ನು ಸಾಧಿಸುವುದು, ಹೂಡಿದ ಬಂಡವಾಳಕ್ಕೆ ತಕ್ಕಂತಹ ಲಾಭ ಗಳಿಸುವುದು, ಕಾರ್ಮಿಕರಿಗೆ ನೀಡಲಾಗುತ್ತಿರುವ ವೇತನಕ್ಕೆ ತಕ್ಕಂತಹ ಉತ್ಪಾದನೆಯನ್ನು ಪಡೆದುಕೊಳ್ಳುವುದರೊಂದಿಗೆ ಮಾಲೀಕರು ಮತ್ತು ಕಾರ್ಮಿಕರ ನಡುವೆ ಸುಮಧುರ ಬಾಂಧವ್ಯವನ್ನು ಸೃಷ್ಟಿಸುವುದರ ಮೂಲಕ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಪರಸ್ಪರ ಸಹಕಾರಗಳೊಂದಿಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದಾಗಿದೆ. ಕಾರ್ಮಿಕರ ದೃಷ್ಟಿಕೋನದಲ್ಲಿ ಕಾರ್ಮಿಕ ಬಾಂಧವ್ಯಗಳ ಯಶಸ್ವಿ ನಿರ್ವಹಣೆಯು ಉತ್ತಮ ವೇತನ ಮತ್ತು ಕಾರ್ಯಸ್ಥಳ ಪರಿಸ್ಥಿತಿ, ಕಾರ್ಮಿಕ ಕಲ್ಯಾಣ ಯೋಜನೆಗಳ ಅನುಷ್ಠಾನ, ಸಾಮಾಜಿಕ/ಸಾಮೂಹಿಕ ಭದ್ರತಾ ಸೌಲಭ್ಯಗಳು, ದೂರು ಪರಿಹರಿಸುವ ಮಾರ್ಗ ಹಾಗೂ ಇನ್ನಿತರ ಬೇಡಿಕೆಗಳನ್ನು ಆಡಳಿತವರ್ಗದಿಂದ ಈಡೇರಿಸಿಕೊಳ್ಳುವುದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಅಥವಾ ಕಾರ್ಮಿಕ ಬಾಂಧವ್ಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಜಾಣ್ಮೆಯಿಂದ ಎರಡೂ ಪಕ್ಷಗಳ ನಡುವೆ ನಿಂತು ಚಾಕಚಕ್ಯತೆಯಿಂದ ಸಮತೋಲನ ಸಾಧಿಸುವ ಮೂಲಕ ಕಾರ್ಮಿಕ ಬಾಂಧವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಿರುತ್ತದೆ. ಈ ಎಲ್ಲಾ ಅಂಶಗಳನ್ನು ಸುವಿವರವಾಗಿ ಲೇಖಕರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
©2024 Book Brahma Private Limited.