ಗುಣದ, ಹಣದ, ಮನದ, ಜಗದ ಮೆಟ್ಟಿಲುಗಳನ್ನು ಏರುವಂತೆ ಕರೆ ನೀಡುವ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಕೃತಿ ’ಹತ್ತು ನಾಲ್ಕು ಮೆಟ್ಟಿಲು’. ಈ ನಾಲ್ಕು ಮೆಟ್ಟಿಲುಗಳು ಜೀವನದ ಹದಿನಾಲ್ಕು ಮೆಟ್ಟಿಲುಗಳಿದ್ದಂತೆ ಎಂಬುದು ಅವರ ಅಭಿಪ್ರಾಯ.
ಪರಿಪೂರ್ಣ ವ್ಯಕ್ತಿತ್ವದ ಮೂಲಕ ಪರಿಪೂರ್ಣ ಜೀವನ ರೂಪಿಸಿಕೊಳ್ಳುವುದು ಸಾಧ್ಯ ಎಂಬುದನ್ನು ಕೃತಿ ಹೇಳುತ್ತದೆ. ’ಅಹೋರಾತ್ರ’ ಪುಸ್ತಕವನ್ನು ರಚಿಸಿದ್ದಾರೆ. ಸಾವಣ್ಣ ಪ್ರಕಾಶನ ಕೃತಿಯನ್ನು ಹೊರತಂದಿದೆ.
ಅಹೋರಾತ್ರ ಎಂತಲೇ ಪರಿಚಿತರಾಗಿರುವ ನಟೇಶ ಪೋಲಪಳ್ಳಿಯವರು ಮೂಲತಃ ಬೆಂಗಳೂರಿನವರು. ವ್ಯಕ್ತಿತ್ವ ವಿಕಸನದ ಕುರಿತು ಹಲವು ಪುಸ್ತಕಗಳನ್ನು ಬರೆದಿರುವ ಇವರ ಪ್ರಮುಖ ಕೃತಿಗಳೆಂದರೆ, ಒಳಗನ್ನಡಿ, ಆಯತನ, ಮೂರ್ಖನ ಮಾತುಗಳು, ಗಗನ ಗೋಚರಿ ವಸುಂದರಾ. ...
READ MORE