ಮಕ್ಕಳನ್ನು ಬೆಳೆಸುವುದು ಕಲೆ. ಮಕ್ಕಳು ಹೇಗೆ ಪೋಷಕರನ್ನು ಸಲಹಬೇಕು ಎಂಬ ನಿರೀಕ್ಷೆ ಇರುತ್ತದೆಯೋ ಹಾಗೆ ಪೋಷಕರು ಮಕ್ಕಳನ್ನು ಬೆಳೆಸುವುದು ಮುಖ್ಯ. ಹಾಗಾಗಿಯೇ ಲೇಖಕ ಡಾ. ಮಹಾಬಲೇಶ್ವರ ರಾವ್ ಕೇವಲ ಹೆತ್ತವರಾಗಬೇಡಿ, ಹೃದಯವಂತ ಹೆತ್ತವರಾಗಿ ಎಂದು ಕರೆ ನೀಡುವ ಪುಸ್ತಕ ಹೊರತಂದಿದ್ದಾರೆ.
ಮಕ್ಕಳು ಚಿಕ್ಕವರಿದ್ದಾಗ, ಹರೆಯಕ್ಕೆ ಬಂದಾಗ ವರ್ತಿಸಬೇಕಾದ ರೀತಿ, ಶಿಸ್ತಿನ ಮಿತಿ ಎಷ್ಟಿರಬೇಕು, ನಾನೇ ಸರಿ ಎಂಬ ಹಠ ಎಷ್ಟು ಸರಿ ಇತ್ಯಾದಿ ಅನೇಕ ಮಹತ್ವದ ವಿಷಯಗಳನ್ನು ಕೃತಿಯಲ್ಲಿ ಚರ್ಚಿಸಲಾಗಿದೆ. ಕ್ಷಮಾ ಗುಣದ ಮಹತ್ವ, ಪ್ರೀತಿಯ ಆರೈಕೆಯಂತಹ ಸಲಹೆಗಳನ್ನು ನೀಡಲಾಗಿದೆ.
ಮಹಾಬಲೇಶ್ವರ ರಾವ್ ಅವರು 1952ರಲ್ಲಿ ಉಡುಪಿ ಜಿಲ್ಲೆಯ ಮಣೂರಿನಲ್ಲಿ ಜನಿಸಿದರು. ಎಂ.ಎ., ಎಂ.ಎಡ್ ಮತ್ತು ಪಿಎಚ್.ಡಿ. ಪದವೀಧರರಾದ ಅವರು ಆರು ವರ್ಷ ಪ್ರೌಢಶಾಲಾ ಕನ್ನಡ ಶಿಕ್ಷಕರಾಗಿ, ಮೂರು ವರ್ಷ ಆಕಾಶವಾಣಿಯ ಭದ್ರಾವತಿ ಹಾಗೂ ಮಂಗಳೂರು ಕೇಂದ್ರಗಳಲ್ಲಿ ಪ್ರಸಾರಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಾಬಲೇಶ್ವರ ರಾವ್ ಕಳೆದ ನಾಲ್ಕು ದಶಕಗಳಿಂದ ಕನ್ನಡ ಭಾಷಾ ಬೋಧನೆ, ಬರವಣಿಗೆ, ಭಾಷಣ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಲೇಖಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ ತಮ್ಮದೇ ಛಾಪು ಮೂಡಿಸಿರುವ ಅವರು 14ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ’ಉದಯವಾಣಿ’, ’ಪ್ರಜಾವಾಣಿ’, ’ತರಂಗ’, ’ಹೊಸತು’ ಮೊದಲಾದ ಕನಡ ದಿನಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಅವರ ನೂರಾರು ಲೇಖನಗಳನ್ನು ಪ್ರಕಟಣೆ ಕಂಡಿವೆ. ...
READ MORE