ರವೀಂದ್ರ ಎಸ್. ದೇಶಮುಖ್ ಅವರ ಕೃತಿ ’ ಛೇ ನಂದೂ ಒಂದು ಲೈಫಾ ಎಂದು ಶಪಿಸುವ ಮುನ್ನ’. ಈ ಕೃತಿಯಲ್ಲಿ ತಮ್ಮ ಅಂತಃಸತ್ವವನ್ನು ಗುರುತಿಸಿಕೊಂಡು ಇತರರಿಗೆ ಬಲವಾಗಿ ಆಸರೆಯಾಗಬಲ್ಲಂಥ ಅನೇಕರ ಕಥನಗಳಿವೆ. ಪ್ರತಿಯೊಂದು ಕಥನವೂ ಬಾಗಿಲ ಬಳಿ ಸೋಲು ಎದುರಾಗಿ ನಿಂತಾಗ, ನಾಶದ ಪ್ರಪಾತದ ಎದುರು ಹೋಗಿ ನಿಂತಾಗ ಅಪಾರವಾದ ಶಕ್ತಿಯನ್ನು ನಮ್ಮೊಳಗೆ ಸೃಜಿಸಿ ನಮ್ಮನ್ನು ಬದುಕಿನತ್ತ ಸೆಳೆದು ತರಬಲ್ಲ ಉದಾಹರಣೆಯನ್ನು ಈ ಪುಸ್ತಕ ಪರಿಚಯಿಸುತ್ತದೆ. ಯಾವುದನ್ನು ಕಷ್ಟವೆಂದು ನಾವು ಗೊಣಗುತ್ತೇವೆಯೋ ಅದಕ್ಕಿಂತಲೂ ಹೆಚ್ಚು ಕಷ್ಟವನ್ನು ಅನುಭವಿಸುವ ಜನ ಸಮಾಜದಲ್ಲಿದ್ದಾರೆ ಎಂಬ ಮೂಲ ಆಶಯವನ್ನು ಈ ಪುಸ್ತಕ ತಿಳಿಸುತ್ತದೆ.
©2024 Book Brahma Private Limited.