ಮಾತು-ಉಚ್ಚಾರಣೆ-ಭಾಷೆಯ ಬಳಕೆಯಲ್ಲಿ ಕುಟುಂಬದ ಸದಸ್ಯರು, ಶಿಕ್ಷಕರು, ನೆರೆಹೊರೆಯವರು, ಮಾಧ್ಯಮಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಆ ಪ್ರಭಾವ ಯಾವ ರೀತಿ ಮಗುವಿನ ಅಕಾರ-ಹಕಾರ, ಅಲ್ಪಪ್ರಾಣ-ಮಹಾಪ್ರಾಣಗಳ ಉಚ್ಚಾರಣೆ, ಭಾವನೆಗಳ ಪ್ರಕಟಣೆ, ವಿಷಯ-ವಿಚಾರ ಮಂಡನೆಯ ಶೈಲಿ, ಆತ್ಮೀಯತೆ ಅಥವಾ ಯಾಂತ್ರಿಕತೆಯನ್ನು ನಿರ್ಧರಿಸುತ್ತವೆ ಎನ್ನುವುದರ ಸಮಗ್ರವಾದ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕ ಇದು. ಸರಿ ಉಚ್ಚಾರಣೆಗೆ ಪ್ರೋತ್ಸಾಹ ನೀಡಿ, ತಪ್ಪು ಉಚ್ಚಾರಣೆ-ಸಂವಹನಕ್ಕೆ ಯಾವ ರೀತಿ ಕಡಿವಾಣ ಹಾಕಬಹುದು ಎಂಬುದನ್ನು ಈ ಪುಸ್ತಕವನ್ನು ಓದಿ ತಿಳಿದುಕೊಳ್ಳಬಹುದು. ವ್ಯಕ್ತಿತ್ವ ಚೆನ್ನಾಗಿರಲು, ಜನಪ್ರಿಯವಾಗಲು, ಪ್ರಭಾವಶಾಲಿಯಾಗಲು ಒಳ್ಳೆಯ ಧ್ವನಿ ಮತ್ತು ಮಾತು ಬಹುಮುಖ್ಯ. ಯಾವ ರೀತಿ ಇವೆರಡನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ನಾವು ಹೇಗೆ ಮಾತಾಡಬೇಕು, ಧ್ವನಿ-ಮಾತಿನ ಮುಖಾಂತರ ನಮ್ಮ ಅನಿಸಿಕೆ, ಭಾವನೆ, ಪ್ರತಿರೋಧ, ಸಹಮತವನ್ನು ಪರಿಣಾಮಕಾರಿಯಾಗಿ ಇತರರಿಗೆ ಹೇಗೆ ತಲುಪಿಸಬೇಕು, ಉತ್ತಮ ಸಂವಹನದ ಗುಣ ಲಕ್ಷಣಗಳೇನು ಎಂಬುದನ್ನೆಲ್ಲಾ ನಿಖರವಾಗಿ, ಓದುಗರಿಗೆ ಅರ್ಥವಾಗುವ ಹಾಗೆ ಲೇಖಕರು ಬರೆದಿದ್ದಾರೆ. ಸರಳ ಭಾಷಾ ಪ್ರಯೋಗ ಈ ಪುಸ್ತಕದ ಪ್ರಮುಖ ಆಕರ್ಷಣೆ.
©2024 Book Brahma Private Limited.