ಪ್ರೇರಣಾದಾಯಕ ಜೀವನಗಾಥೆಗಳ ಗುಚ್ಛ ‘ಖುಷಿ ಹಂಚೋಣ ಬನ್ನಿ’. ಸಮಾಜ ಹಾಳಾಗಿದೆ, ಒಳ್ಳೆಯವರೂ ಇಲ್ಲ , ಒಳ್ಳೆಯತನವೂ ಇಲ್ಲ’ ಎಂಬ ನೀರಸ-ಹತಾಶೆಯ ಮಾತುಗಳಿಗೆ ಉತ್ತರವಾಗಿ ಒಳಿತನ್ನು ಹಂಚುವ ಸಜ್ಜನಶಕ್ತಿಯ ಪ್ರಭೆಯನ್ನು ಅಕ್ಕರೆಯ ಅಕ್ಷರದ ಮೂಲಕ ಮನೆ-ಮನಗಳಿಗೆ ತಲುಪಿಸುವ ಕಾರ್ಯವನ್ನು ಲೇಖಕರು ಸಾಧಕರನ್ನು ಪರಿಚಯಿಸುವ ಮೂಲಕ ಮಾಡಿದ್ದಾರೆ.
ಅಂಕಣಕಾರ ರವೀಂದ್ರ ದೇಶಮುಖ್ ಅವರು ವಿಜಯವಾಣಿ ದಿನಪತ್ರಿಕೆಯಲ್ಲಿ ’ಜರೂರ್ ಮಾತು’ ಎಂಬ ಅಂಕಣ ಬರೆಯುತ್ತಾರೆ. ಛೇ ನಂದೂ ಒಂದು ಲೈಫಾ ಎಂದು ಶಪಿಸಿಕೊಳ್ಳುವ ಮುನ್ನ ಹಾಗೂ ಖುಷಿ ಹಂಚೋಣ ಬನ್ನಿ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MORE