ಮಾನಸಿಕ ಒತ್ತಡ, ಮನಃಕ್ಲೇಶ, ಬೇಸರ, ದುಃಖ, ಭಯ, ಕೋಪ, ಅಸಹಾಯಕತೆಗಳಿಗೆ ಒಳಗಾದವರು ಯಾರಿದ್ದಾರೆ? ಆಬಾಲವೃದ್ಧರಾದಿಯಾಗಿ, ಎಲ್ಲ ವರ್ಗದವರು, ಎಲ್ಲ ವೃತ್ತಿಯಲ್ಲಿರುವವರು, ಸ್ತ್ರೀಪುರುಷರು ಇವಕ್ಕೆ ಹೊರತಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲದೆ ಪಕ್ಕದಲ್ಲಿ ಕುಳಿತು, ಬೆನ್ನು ಸವರಿ ಕೈಹಿಡಿದು ‘ಮುಂದಿನ ದಾರಿ ಹೀಗೆ ಸಾಗಬಹುದಾ’ ಎಂದು ಸಾಂತ್ವಾನ, ಸಲಹೆ ನೀಡುವ ಕೃತಿ ಇದು. ದುಃಖಿತರಿಗೆ, ಸಂಕಟದಲ್ಲಿರುವವರಿಗೆ, ಆತಂಕ, ಬೇಸರಗಳಿಂದ, ಸೋಲು, ನಿರಾಶೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ, ದೈಹಿಕ-ಮಾನಸಿಕ ರೋಗಗಳಿಗೆ ತುತ್ತಾದವರಿಗೆ ಸಂಜೀವಿನಿಯಾಗಬಲ್ಲದು. 1966ರಲ್ಲಿಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ಗೆ ಈ ಕೃತಿ ಭಾಜನವಾಗಿದೆ.
©2025 Book Brahma Private Limited.