ಲೇಖಕ ಸಂಪಟೂರು ವಿಶ್ವನಾಥ ಅವರ ಕೃತಿ-ಸಮಕಾಲೀನ ಸುಭಾಷಿತಗಳು. ಒಟ್ಟು 1750 ಸುಭಾಷಿತಗಳುನ್ನು ಒಳಗೊಂಡಿದೆ. ಶ್ರಮ, ಧರ್ಮ, ದೇವರು, ಆತ್ಮವಿಶ್ವಾಸ, ಪ್ರಯತ್ನ ಇತ್ಯಾದಿ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಸುಭಾಷಿತಗಳಿದ್ದು, ಹೆಚ್ಚಾಗಿ ಪ್ರಸಕ್ತ ವಿದ್ಯಮಾನಗಳ ಚಿಂತನೆಗಳು ಸುಭಾಷಿತದ ಮೌಲ್ಯವನ್ನು ಹೆಚ್ಚಿಸಿವೆ. ಉದಾಃ ನಗುಮುಖದ ಸ್ವಾಗತ; ಹಬ್ಬದೂಟಕ್ಕಿಂತ ಸಿಹಿ. ಬಹಳ ದೂರ ನೋಡಬೇಡ; ನೀನು ಎಡವಿ ಬೀಳಬಹುದು, ಕಣ್ಣಿಲ್ಲದವನಿಗೆ ಕಾಮನ ಬಿಲ್ಲಿನ ಸೌಂದರ್ಯವನ್ನು ಬಣ್ಣಿಸಬೇಡ, ತೃಪ್ತಿ ತಳವೂರಿದರೆ ಪ್ರಗತಿ ಕುಂಟಲಾರಂಭಿಸುತ್ತದೆ ...ಹೀಗೆ ಸುಭಾಷಿತಗಳಿದ್ದು, ಹೊಸ ಚಿಂತನೆಯತ್ತ ಓದುಗರ ಮನ ಸೆಳೆಯುತ್ತವೆ.
©2024 Book Brahma Private Limited.