ಪತಂಜಲಿಯ ಯಫೋಗ ಕುರಿತು ಮೈಕೆಲ್ ಬಿಲವ್ಡ್ ಅವರು ಬರೆದ ಕೃತಿಯನ್ನು ಅರ್ಪನ ಉಕ್ಕುಂದ್ ಅವರು ಕನ್ನಡಕ್ಕೆ ಅನುವಾದಿಸಿದ್ದೇ-ಪತಂಜಲಿ ಯೋಗ ಸೂತ್ರಗಳು. ಈ ಪುಸ್ತಕವು ಯೋಗದ ಸಂಪೂರ್ಣ ಪಠ್ಯಕ್ರಮವಾಗಿರುವ ಪತಂಜಲಿ ಯೋಗ ಸೂತ್ರಗಳಿಗೆ ಅನುವಾದ, ವಿಶ್ಲೇಷಣೆ, ಅನ್ವಯ ಹಾಗೂ ಸಂಬಂಧಿತ ರೇಖಾಚಿತ್ರಗಳನ್ನು ಹೊಂದಿದೆ. ಪತಂಜಲಿ ಯೋಗ ಕುರಿತು ಸವಿಸ್ತಾರವಾದ ವಿವರಣೆಯನ್ನು ಈ ಕೃತಿ ಒಳಗೊಂಡಿದೆ.
ಧ್ಯಾನಗಳ ಬಗ್ಗೆ ಆಸಕ್ತಿ ಹೊಂದಿರುವ ಅರ್ಪನ ಉಕ್ಕುಂದ್ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. 1992ರಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಶಿಕ್ಷಾ ಕೇಂದ್ರವನ್ನು ಸೇರಿದ ಇವರು ಅಷ್ಟಾಂಗ ಯೋಗವನ್ನು ಕಲಿತಿದ್ದಾರೆ. ಯೋಗಕ್ಕೆ ಸಂಬಂಧಿಸಿದಂತೆ ಧ್ಯಾನ-ಸಚಿತ್ರ, ನಿದ್ರಾ ಪಾರ್ಶ್ವವಾಯು, ಆಸ್ಟ್ರಲ್ ಪ್ರೊಜೆಕ್ಷನ್ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ...
READ MORE