ಸೌಜನ್ಯ ಮಾನವನ ನಡವಳಿಕೆಯಲ್ಲಿರಬೇಕಾದ ಮುಖ್ಯವಾದ ಅಂಶ ಎಂಬುದು ಚಾಲ್ತಿಯಲ್ಲಿರುವ ಮಾತು. ಅಷ್ಟಕ್ಕೂ ಈ ಸೌಜನ್ಯ ಅಂದರೇನು? ಅದನ್ನು ನಮ್ಮ ನಡವಳಿಕೆಯಲ್ಲಿ ರೂಢಿಸಿಕೊಳ್ಳುವುದು ಹೆಗೆ? ಮಕ್ಕಳಿಗೆ ಇದನ್ನು ಕಲಿಸಲು ಸಾಧ್ಯವೇ ? ಸೌಜನ್ಯವನ್ನು ಶಾಲೆಯಲ್ಲಿ ಕಲಿಸಬಹುದೇ ? ಮನೆಯಲ್ಲಿ ಕಲಿಯಬಹುದೇ ? ಸೌಜನ್ಯದ ನಡವಳಿಕೆಯಿಂದ ದಾರಿ ತಪ್ಪುವ ಸಂದರ್ಭಗಳು ಇರುತ್ತವೆಯೇ ? ಈ ಎಲ್ಲಾ ಪ್ರಶ್ನೆಗಳಿಗೂ ಈ ಪುಸ್ತಕ ಉತ್ತರಿಸುತ್ತದೆ. ಸೌಜನ್ಯತೆ ರೂಢಿಸಿಕೊಳ್ಳುವ ಬಗೆಯನ್ನು ಅರಹುವ ಕೃತಿ ಇದು.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE