‘ಆತ್ಮಗುಣ 8 ಇದ್ದರೆ ನೆಮ್ಮದಿ’ ಜಗದೀಶ ಶರ್ಮಾ ಅವರ ರಚನೆಯ ಕೃತಿಯಾಗಿದೆ. 'ಯಾರು ನೀನು?' ಎಂದು ಪರಿಚಯ ಕೇಳಿದರೆ- 'ನಾನೆಂದರೆ ದಯಾವಂತ; ನಾನೆಂದರೆ ಸಹನಶೀಲ; ನಾನೆಂದರೆ ಅಸೂಯೆ ಇಲ್ಲದವ; ನಾನೆಂದರೆ ಪರಿಶುದ್ಧ; ನಾನೆಂದರೆ ಸರಿಯಾದ್ದನ್ನೇ ಮಾಡುವವ; ನಾನೆಂದರೆ ದಾನಶೀಲ' ಎಂದೆಲ್ಲ ಪರಿಚಯ ಹೇಳಬೇಕು ಎನ್ನುತ್ತಾರೆ ಋಷಿಗಳು. ಇವು ಆತ್ಮಗುಣಗಳು. ಮನುಷ್ಯ ನೆಮ್ಮದಿಯಾಗಿರಲು ಬೇಕಾಗುವ ಆ ಆತ್ಮಗುಣದ ಬಗ್ಗೆ ತಿಳಿಸುವ ಕೃತಿ ಇದು.
©2024 Book Brahma Private Limited.