ಶಿಕ್ಷಣ ತಜ್ಞರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕಾಗಿರುವ ಪ್ರಸ್ತುತತೆಯ ಬಗ್ಗೆ ವಾದ, ವಿವಾದ, ಸಂವಾದಗಳು ನಡೆಯುತ್ತಿರುತ್ತವೆ. ಪ್ರಜಾಪ್ರಭುತ್ವದ ಪದ್ಧತಿಯ ಜೀವನ ವಿಧಾನ ಯಶಸ್ವಿಯಾಗಬೇಕಾದರೆ ಗತಕಾಲದ ನೀತಿ, ಅನೀತಿಗಳ ಬಂಧನದಿಂದ ಹೊರಬಂದು ಸಮಾನತೆ, ಸ್ವಾತಂತ್ರ್ಯ ಹಾಗೂ ಸೋದರಭಾವಗಳನ್ನು ಉದ್ದೀಪನಗೊಳಿಸುವ ಮಾನವೀಯ ಮೌಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಾಗುತ್ತದೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅನುಸರಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಇಂದಿನ ಕಾಲಮಾನಕ್ಕೆ ಅಗತ್ಯವಾದ ಸಮಾನತೆ, ಶಾಂತಿ, ಸಹಬಾಳ್ವೆ, ಮಾನವ ಹಕ್ಕುಗಳ ಮನ್ನಣೆ, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ, ಅಂಧಶ್ರದ್ಧೆಯ ನಿವಾರಣೆ, ಶ್ರಮ ಗೌರವ ಪ್ರಜ್ಞೆ ಇತ್ಯಾದಿಗಳನ್ನು ಮಕ್ಕಳ ಶಿಕ್ಷಣದಲ್ಲಿ ಅಳವಡಿಸುವುದು ಹೇಗೆಂಬುದನ್ನು ವಿವರವಾಗಿ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE