’ಗೆಲುವು ನಿಮ್ಮದಾಗಬೇಕೆ?’ ವಿನಾಯಕ ಕೊಡ್ಸಾರ ಹಾಗು ಸುಷ್ಮಾ ಚಕ್ರೆ ಯವರು ಬರೆದಿರುವ ಬದುಕು ಬದಲಿಸಿದವರ ನೈಜ ಕಥೆಗಳ ಸಂಗ್ರಹ.
ಬದುಕಿಗೆ ಮಿತಿಯೆ ಇಲ್ಲದಂತೆ ಬದುಕಿದ ನಿಕೋಲಸ್ ಜೇಮ್ಸ್ ವೂಯಿಚಿಚ್ ಅವರಿಗೆ ಹುಟ್ಟುತ್ತಲೆ ಕೈಗಳಿಲ್ಲ ಹಾಗೆ ಬಳಕೆಗೆ ಯೋಗ್ಯವಲ್ಲದ ಪುಟ್ಟ ಪಾದಗಳು.ಅಮ್ಮನ ಆಸರೆ ಬಿಟ್ಟು ಬದುಕಲಾರದ ಅಸಹನೀಯ ಸ್ಥಿತಿಯಲ್ಲಿ ಪದವಿ ಪಡೆದು ದೇಶಗಳ ಸುತ್ತುತ್ತಾನೆ. ಪುಸ್ತಕ ಬರೆಯುತ್ತಾನೆ, ಭಾಷಣಗಳ ಮಾಡುತ್ತಾ ಟೆಲಿಚಿತ್ರಗಳ ಮಾಡುತ್ತ, ಬಹುಮಾನ ಗಳಿಸುತ್ತ ಲಕ್ಷಾಂತರ ಅಂಗವಿಕಲರಿಗೂ ಬದುಕು ಬದುಕಲಿರುವಂತಹದು ಎಂದು ತೋರಿಸಿಕೊಡುತ್ತಾನೆ.
ಅರುಣಿಮಾ ಪೋಲೀಸ್ ಆಗುವ ಕನಸ ಹೊತ್ತು ಹುಟ್ಟಿದವಳು. ಆದರೆ ಅದೊಂದು ದಿನ ರೈಲಿನಲ್ಲಿ ಕಳ್ಳರ ದಾಳಿಯಿಂದ ರೈಲಿಂದ ಕೆಳಗೆ ನೂಕಲ್ಪಟ್ಟ ಅವಳ ಕಾಲ್ಗಳು ಇನ್ನಿಲ್ಲವಾಗುತ್ತವೆ. ದಯನೀಯ ದಾರುಣ ಸ್ಥಿತಿ ಅವಳದು. ಆದರೆ ಅವಳ ಛಲ ಹಿಮಾಲಯ ಏರುವಂತೆ ಮಾಡಿತು. ಹಿಮಾಲಯ ಏರಿದ ಮೊದಲ ಅಂಗವಿಕಲೆಯಾಗಿಬಿಟ್ಟಳು.
ನಮ್ಮ ಸುತ್ತಲೇ ಬದುಕಿರುವ ದುರ್ಬರ ಸ್ಥಿತಿಯಲ್ಲೂ ಜೀವನ ಸಾಧನೆ ಮಾಡಿದ ಇಂತಹ ಇಪ್ಪತ್ತು ಸ್ಫೂರ್ತಿದಾಯಕ ಚೇತನಗಳನ್ನು ಕೃತಿ ಪರಿಚಯಿಸುತ್ತದೆ.
©2025 Book Brahma Private Limited.