ಅನುಕ್ಷಣ ಅನುಭವಿಸಿ

Author : ಜಯಪ್ರಕಾಶ್ ನಾಗತಿಹಳ್ಳಿ

₹ 95.00




Year of Publication: 2017
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ವ್ಯಕ್ತಿತ್ವ ವಿಕಸನ ತರಬೇತುದಾರರಾದ ಲೇಖಕ ಜಯಪ್ರಕಾಶ ನಾಗತಿಹಳ್ಳಿ ಅವರ ಕೃತಿ-ಅನುಕ್ಷಣ ಅನುಭವಿಸಿ. ಸಮಯ ನಿರ್ವಹಣೆಯಿಂದ ಯಶಸ್ಸಿನ ಪಥ ನಿರ್ಮಾಣ ಎಂಬುದು ಈ ಕೃತಿಯ ಉಪಶೀರ್ಷಿಕೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೃತಿ ಇದು. ಬದುಕಿನ ಪ್ರತಿ ಕ್ಷಣವನ್ನು ಉತ್ಪಾದನೆಯ ಮೂಲವಾಗಿಸಬೇಕು. ಕ್ಷಣಗಳನ್ನು ವ್ಯರ್ಥ್ಯ ಮಾಡುತ್ತಾ ಹೋದರೆ ಗಂಟೆಗಳ ಸದುಯೋಗ ಅಸಾಧ್ಯವಾಗುತ್ತದೆ. ಹೀಗಾಗಿ, ಇಡೀ ಬದುಕೇ ಅಪ್ರಯೋಜನವಾಗಿ, ಹತಾಶೆ, ನಿರಾಸೆ ಕಾಡುತ್ತದೆ. ವ್ಯಕ್ತಿಯು ಆತ್ಮಹತ್ಯೆಗೂ ಪ್ರಯತ್ನಿಸಬಹುದು. ಆದ್ದರಿಂದ, ಬದುಕಿನ ಕ್ಷಣಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬದುಕಿನ ಸಾರ್ಥಕತೆ ಇದೆ. ಪ್ರತಿ ಕ್ಷಣವನ್ನು ಸಂಭ್ರಮದ ಕ್ಷಣಗಳನ್ನಾಗಿ ಪರಿವರ್ತಿಸಿ ಬದುಕಿನ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕು ಎಂಬ ಪ್ರೇರಣಾತ್ಮಕ ಚಿಂತನೆಗಳನ್ನು ಈ ಕೃತಿ ಒಳಗೊಂಡಿದೆ.

About the Author

ಜಯಪ್ರಕಾಶ್ ನಾಗತಿಹಳ್ಳಿ

ಕನ್ನಡದ ಬಗ್ಗೆ ಅಪಾರ ಪ್ರೀತಿಯುಳ್ಳ ಜಯಪ್ರಕಾಶ್ ನಾಗತಿಹಳ್ಳಿ ಅವರು ಮೂಲತಃ ಸಕ್ಕರೆ ನಾಡಿನ ಮಂಡ್ಯದವರು. ಇವರು ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ಪದವಿ, ತಾಂತ್ರಿಕ ಶಿಕ್ಷಣ ಮಂಡಳಿಯ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ, ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದಾರೆ. ಬೆಂಗಳೂರು ದೂರದರ್ಶನದ ಮಾರ್ಗವಾಚಕರಾಗಿ, ಚಂದನ ವಾಹಿನಿಯ ಸಂದರ್ಶಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಜೇಸೀಸ್‌ನ ಅಧ್ಯಕ್ಷರಾಗಿದ್ದ ಇವರು, ಭಾರತೀಯ ಜೇಸೀಸ್‌ನ ವಲಯ-14ರ ಸಂಯೋಜನಾಧಿಕಾರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ವ್ಯಕ್ತಿತ್ವ ವಿಕಸನದ ಬಗೆಗೆ ಕನ್ನಡದಲ್ಲಿ ಪ್ರಪ್ರಥಮವಾಗಿ ‘ನಡೆ-ನುಡಿ' ವ್ಯಕ್ತಿತ್ವ ವಿಕಸನದ ಅಲೆಗಳು ಎಂಬ ಧ್ವನಿಸುರುಳಿಯನ್ನು ಹೊರತರುವುದು ಇವರ ಹೆಗ್ಗಳಿಕೆ. ಆನಂತರ ...

READ MORE

Related Books