ಇಲ್ಲಿಯ ಬರಹಗಳು ಮಕ್ಕಳ ಬದುಕನ್ನು ಸ್ವಚ್ಛಂದವಾಗಿರಿಸುವ ಪ್ರಾಮಾಣಿಕ ಕಾಳಜಿಯನ್ನು ತೋರುತ್ತವೆ. ಅಂತೆಯೇ ಮಕ್ಕಳ ವಿಷಯದಲ್ಲಿ ತಂದೆ ತಾಯಿಗಳು ವಹಿಸಬಹುದಾದ ಎಚ್ಚರಗಳ ಬಗ್ಗೆಯೂ ಇಲ್ಲಿ ಲೇಖಕ ಮಹಾಬಲೇಶ್ವರ ರಾವ್ ಹೇಳುತ್ತಾರೆ.
ಮಕ್ಕಳ ಬೈಕ್ ಸವಾರಿ, ಲೈಂಗಿಕ ಶಿಕ್ಷಣದ ಕೊರತೆ, ಮಾದಕ ವಸ್ತುಗಳ ವ್ಯಸನ ಮುಂತಾದ ಸಂಗತಿಗಳ ಬಗ್ಗೆ ನವಿರಾಗಿ ವಿಶ್ಲೇಷಿಸಿದ್ದಾರೆ. ತಮ್ಮ ಬಗೆಗೆ ಮಕ್ಕಳೆ ವಹಿಸಬಹುದಾದ ಎಚ್ಚರ, ಪಾಲಕರು ಮಕ್ಕಳ ಬಗೆಗೆ ಇಡಬೇಕಾದ ಕಾಳಜಿ, ಇಡೀ ವ್ಯವಸ್ಥೆಯೇ ಮಕ್ಕಳ ಪರವಾಗಿ ರೂಪುಗೊಳ್ಳಬೇಕಾದ ಬಗೆ. ಈ ಮೂರನ್ನೂ ಈ ಕೃತಿಯು ವಿಶ್ಲೇಷಣೆಗೆ ಒಡ್ಡುತ್ತದೆ.
(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)
ಮೊಗ್ಗು ಸಹಜವಾಗಿ ಅರಳಬೇಕು. ಪಕಳೆ ಬಿಡಿಸಿ ಬೇಗ ಅರಳಿಸಲು ನೋಡಿದರೆ ಅದು ಅರಳುವ ಬದಲು ಮುದುಡಬಹುದು. ಮಕ್ಕಳು ಸಹ ಯಾವುದೇ ಒತ್ತಡವಿಲ್ಲದೆ ನಕ್ಕು ನಲಿಯಬೇಕಾದರೆ ಬಾಲ್ಯದಲ್ಲಿ ಸೂಕ್ತ ಮತ್ತು ಸಹ್ಯ ವಾತಾವರಣ ಬೇಕು. ಬಾಲ್ಯದಲ್ಲಿ ವಿಪರೀತ ಶಿಸ್ತು, ಭಯದ ವಾತಾವರಣ, ಹೊಡ ಅಪಮಾನಗಳನ್ನು ಸಹಿಸಿ ನೋವುಂಡ ಮಗು ಎಲ್ಲರಂತಿರದೆ ಆತ್ಮವಿಶ್ವಾಸ ಕಳೆದುಕೊಂಡಿರುತ್ತದೆ. ನಮ್ಮ ದೇಶದ ಕುಟುಂಬಗಳಲ್ಲಿ ಮಕ್ಕಳ ಪಾಲನೆ ಒಂದು ಸಮಸ್ಯೆಯಾದರೆ ಸಿರಿವಂತ ಕುಟುಂಬದವರಿಗೆ ಮಗುವನ್ನು ಗಮನಿಸಲ ಸಮಯವಿಲ್ಲ! ಎಲ್ಲಕ್ಕೂ ಆಳುಕಾಳು, ಸುರಕ್ಷಿತ ಭಾವನೆ, ಒತ್ತಡ ಇಲ್ಲದ ನಿರ್ಭಯ ವಾತಾವರಣ ಮಗುವಿಗೆ ಇಂದಿ ದಿನಗಳಲ್ಲಿ ಸಿಗುವುದು ಕಷ್ಟ. ಸಂತೋಷದ ಬಾಲ್ಯ ಎಷ್ಟೊಂದು ಅಗತ್ಯವೆಂಬುದನ್ನು ಇಲ್ಲಿ ಶಿಕ್ಷಣತಜ್ಞ ಮಹಾಬಲೇಶ್ವ ರಾವ್ ಉದಾಹರಣೆಗಳ ಸಹಿತ ನಿರೂಪಿಸಿದ್ದಾರೆ. ತಮ್ಮ ಬಾಲ್ಯ ಹೇಗಿತ್ತೆಂಬುದನ್ನೂ ಹಿಂತಿರುಗಿ ನೋಡಿ ಅನುಭವಗ ಸಹಿತ ಮನೋವೈಜ್ಞಾನಿಕ ಮತ್ತು ಸಮಾಜ ಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಎಲ್ಲ ಹೆತ್ತವರು, ಪೋಷಕರು, ಶಾಲೆ ಶಿಕ್ಷಕರು ಈ ಪುಸ್ತಕವನ್ನು ಓದುವುದಷ್ಟೇ ಅಲ್ಲದೆ ಮಕ್ಕಳಿಗೆ ಸಂತೋಷದಾಯಕ ಬಾಲ್ಯವನ್ನು ಕಳೆಯಲು ನೆರವಾಗಬೇಕ ಮಕ್ಕಳಿಗಿರುವ ಮೂಲಭೂತ ಹಕ್ಕುಗಳು ಯಾವುವು, ಹದಿಹರೆಯದವರ ಮನೋಸ್ಥಿತಿ, ಮಾದಕ ವಸ್ತುಗಳಿಗೆ ಸುಲಭವ ಬಲಿಯಾಗುವ ಯುವಜನತೆ, ಇವಕ್ಕೆಲ್ಲ ಕಾರಣಗಳು ಹಾಗೂ ಪರಿಹಾರ ರೂಪದ ಸಲಹೆಗಳೂ ಈ ಕೃತಿಯಲ್ಲಿವೆ.
---
(ಹೊಸತು, ಮಾರ್ಚ್ 2015, ಪುಸ್ತಕದ ಪರಿಚಯ)
ಮಕ್ಕಳನ್ನು ಶಿಸ್ತುಬದ್ಧವಾಗಿ ಬೆಳೆಸುವ ನೆಪದಲ್ಲಿ ಅತಿ ಒತ್ತಡ ಹೇರಿ ತನ್ಮೂಲಕ ಸಹಜ ಪ್ರತಿಭೆಗೆ ಅಡ್ಡಿಪಡಿಸುವ ಪಾಲಕರು - ಪೋಷಕರು ಓದಲೇಬೇಕಾದ ಕೃತಿಯಿದು.
ಇಂದು ನೂರೆಂಟು ಕಲಿಕೆಯ ಹೊರೆಯಿಂದಾಗಿ ಮಗು ಬಳಲುತ್ತಿದೆ. ತನ್ನ ಆಸಕ್ತಿಗಿಂತ ಹೆತ್ತವರ – ಅಧ್ಯಾಪಕರ - ಇತರರ ಆಷ್ಟಾಾಲಕವಾಗಿ ಅದು ಇಷ್ಟವಿಲ್ಲದ್ದನ್ನು ಕಲಿಯಬೇಕಾಗಿದೆ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯನ್ನು ಹಿಡಿದು ತಂದು ಪಂಜರದಲ್ಲಿ ಅಟ್ಟಂತಾಗಿದೆ. ಇಂದಿನ ಮಕ್ಕಳ ಸ್ಥಿತಿ ಅರಳುವ ಮೊಗೊಂದನ್ನು ಬೇಗ ಅರಳಲೆಂದು ದಳಗಳನ್ನು ಬಲವಂತದಿಂದ ಬಿಡಿಸಿ 'ಆರಳಿಸುವ' ಹಾಗೆ ನಾವು ಅವಸರಪಡಿಸಿದರೆ ಬಾಡಿ ಮುದುಡುವುದು ಖಂಡಿತ
ಆಡುವ ಹಾಡುವ ಮತ್ತು ಕುಣಿಯುವ ಮಕ್ಕಳ ಬಾಲ್ಯವನ್ನು ನಾವು ಕಸಿದುಕೊಳ್ಳುತ್ತಿದ್ದೇವೆ. ಮಕ್ಕಳು ನಮ್ಮ ಆಟಿಕೆಗಳಲ್ಲ, ಅವರಲ್ಲಿ ಸುಪ್ತ ಪ್ರತಿಭೆ ಇದೆ. ನಮ್ಮ ಇಷ್ಟದಂತೆ ಕುಣಿಯುವ ಬೊಂಬೆಗಳೂ ಅಲ್ಲ – ಅವಕಾಶ ಸಿಕ್ಕಿದಾಗ ಸ್ವಂತ ಯೋಜನೆಯಿಂದ ಏನನ್ನೂ ಸಾಧಿಸ ಬಲ್ಲವರೆಂದು ನಾವು ಮನಗಾಣಬೇಕು, ಮಕ್ಕಳ ಮನಸ್ಸನ್ನು ಷಿಯಾಗಿಸಬೇಕೆಂಬುದೇ ಇಲ್ಲಿನ ಸಂದೇಶ. ಅಲ್ಲದೆ ಶಾಲೆ-ಮನೆಗಳಲ್ಲಿ ಭಯಮುಕ್ತ ವಾತಾವರಣ ಸೃಷ್ಟಿಸಿ ಕೀಳರಿಮೆ ಹೋಗಲಾಡಿಸುವುದು ಆವಶ್ಯ. ಹೀಗೆ ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ಹಲವು ಉಪಯುಕ್ತ ಸಲಹೆ-ಸೂಚನೆ ನೀಡಿದ್ದಾರೆ ಖ್ಯಾತ ಶಿಕ್ಷಣ ತಜ್ಞ, ಡಾ| ಮಹಾಬಲೇಶ್ವರ ರಾವ್, ಖಷಿಯೇ ಮೈದುಂಬಿ ಬಂದಂತಿರುವ ಮುಖಪುಟದ ಮಕ್ಕಳ ಚಿತ್ರ ಅಕರ್ಷಣೆ.
©2024 Book Brahma Private Limited.