‘100 ನಿಮಿಷಗಳು’ ಕೃತಿಯ ಮೂಲ ಲೇಖಕ ಎಲ್. ಪ್ರಕಾಶ್. ಈ ಕೃತಿಯನ್ನು ನಾಗರಾಜು ವಿ. ಕನ್ನಡಕ್ಕೆ ಅನುವಾದಿಸಿದ್ದಾರೆ. ಜೀವನ ಕೆಲವೊಮ್ಮೆ ಏಕತಾನತೆಗೆ ಹೊರಳಿ ಆಲಸಿ ತೆಕ್ಕೆಯನ್ನು ಆತುಕೊಂಡು ಬಿಡುತ್ತದೆ. ಮತ್ತೆ ಕೆಲ ಬಾರಿ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಸೂತ್ರ ಹರಿದ ಗಾಳಿಪಟದಂತೆ ತತ್ತರಿಸತೊಡಗುತ್ತದೆ. ಇಂಥ ಸಂಕಷ್ಟಗಳು, ಏಕತಾನತೆಯನ್ನು ಹೇಗೆ ಎದುರಿಸಿ ನಿಲ್ಲುವುದು ಎನ್ನುವುದೇ ಈ ಪುಸ್ತಕದ ಮೂಲಮಂತ್ರ.
ಬದುಕಿನ ಬಗೆಗೆ ಈ ಪುಸ್ತಕದಲ್ಲಿ ನೀಡಲಾಗಿರುವ ಒಳನೋಟ, ಗ್ರಹಿಕೆಗಳು ಎಲ್ಲಕ್ಕೂ ಮಿಗಿಲಾಗಿ ಅಮೂಲ್ಯ ಸಲಹೆಗಳು ಎಲ್ಲೆಡೆ ಸಲ್ಲುವಂಥವು. ಎಲ್ಲ ವಯೋಮಾನ, ವರ್ಗ, ವೃತ್ತಿಗಳ ಜನರನ್ನು ಯಶಸ್ಸಿನ ಹಾದಿಯಲ್ಲಿ ಸಾಗಲು ಅಣಿಗೊಳಿಸುವ ಅನುಭವ ದ್ರವ್ಯ ಈ ಹೊತ್ತಿಗೆಯಲ್ಲಿದೆ. ಹಾಸ್ಯಪ್ರಸಂಗ, ಕತೆ, ಜೋಕ್, ಕಂಡು ಕೇಳಿದ ಘಟನೆ ಹಾಗೂ ಸ್ವಂತ ಅನುಭವಗಳನ್ನು ಎರಕ ಹೊಯ್ದು ಲೇಖಕರು ಈ ಪುಸ್ತಕ ರೂಪಿಸಿದ್ದಾರೆ.
©2024 Book Brahma Private Limited.