ಪತಾಂಜಲಿಯ ಯೋಗಸೂತ್ರಗಳು ಮತ್ತು ವ್ಯಕ್ತಿತ್ವ ವಿಕಾಸ-ಈ ಕೃತಿಯನ್ನು ಲೇಖಕ ಹಾಗೂ ಯೋಗಪಟು ಎಸ್. ಎನ್. ಓಂಕಾರ್ ಅವರು ರಚಿಸಿದ್ದು, ಯೋಗವು ಕಸರತ್ತು ತರಬೇತಿಗಿಂತ ಭಿನ್ನ. ಆದ್ದರಿಂದ, ಯೋಗವು ಶಿಸ್ತುಬದ್ಧತೆಯನ್ನು ಹೊಂದಿದೆ. ಪತಾಂಜಲಿಯ ಯೋಗಸೂತ್ರಗಳ ವಿವರಣೆ ಇಲ್ಲಿದ್ದು, ಈ ಸೂತ್ರಗಳು ಹೇಗೆ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತವೆ ಎಂಬ ಬಗ್ಗೆ ವಿವರ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ಸಾಹಿತಿ ನಾ. ಸೋಮೇಶ್ವರ ಈ ಕೃತಿ ಸಂಪಾದಿಸಿದ್ದಾರೆ.
ವೃತ್ತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ.ಎಸ್.ಎನ್. ಓಂಕಾರ್ ಅವರು ಬಿ.ಕೆ.ಎಸ್. ಅಯ್ಯಂಗಾರ್ ಅವರ ಆಪ್ತ ಶಿಷ್ಯರುಗಳಲ್ಲಿ ಒಬ್ಬರು. ಕಳೆದ ಮೂರು ದಶಕಗಳಿಂದ ನಿರಂತರವಾಗಿ ಯೋಗ ವಿಜ್ಞಾನವನ್ನು ಅಭ್ಯಾಸ, ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡಿ, ಯೋಗ ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ನಡೆಸುತ್ತಿರುವ ಇವರು ಯೋಗ ಶಿಕ್ಷಣವನ್ನು ಕ್ರೀಡಾ ಕ್ಷೇತ್ರದಲ್ಲಿ ಪರಿಚಯಿಸಿದವರಲ್ಲೇ ಮೊದಲಿಗರಾಗಿದ್ಧಾರೆ. ...
READ MORE