’ನಾನು’ ಎಂಬ ಅಹಂಕಾರ ಹಾಗೂ ’ನಾನು’ ಎಂಬ ಆರೋಗ್ಯಕರ ಮನಸ್ಥಿತಿಯ ನಡುವಿನ ವ್ಯತ್ಯಾಸವನ್ನು ಗುರುತಿಸಿ ಅವುಗಳಲ್ಲಿ ಸಮತೋಲನ ಕಾಪಾಡುವ ಜೀವನ ವಿಧಾನವನ್ನು ಕೃತಿ ವಿವರಿಸುತ್ತದೆ. ಮನಸ್ಸಿನ ವೈಜ್ಞಾನಿಕ ಅರಿವಿನ ಆಶಯ ಹೊಂದಿರುವ ಪುಸ್ತಕ ವಿಭಿನ್ನ ವಸ್ತು ಮತ್ತು ಸೊಗಸಾದ ನಿರೂಪಣೆಯಿಂದ ಗಮನ ಸೆಳೆಯುತ್ತದೆ.
ರಾಜು ಗಡ್ಡಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಶ್ವಿನಹಳ್ಳಿ ಗ್ರಾಮದವರು. ‘ಜನ್ಮ-ಧರ್ಮ’ ಎಂಬ ಕೃತಿಯ ಮೂಲಕ ಸಾಹಿತ್ಯ ವಲಯ ಪ್ರವೇಶಿಸಿದ ಇವರು ‘ಒಂದು ನೂರು ರೂಪಾಯಿಗಳು’, ‘ಶಿಶ್ವನಹಳ್ಳಿ ರೇಲ್ವೆ ಸ್ಟೇಷನ್’, ‘ಹೆಣಗಾಟ’ ಕಾದಂಬರಿಗೆ 2011ನೇ ಸಾಲಿನ ಬೇಂದ್ರೆ ಪ್ರಶಸ್ತಿ ದೊರೆತಿದೆ. ಇವರ ಮತ್ತೊಂದು ಕೃತಿ ‘ನಾನು’ ಪ್ರಕಟವಾಗಿದೆ. ...
READ MORE