ಲೇಖಕರು “ಮಕ್ಕಳನ್ನು ಬೆಳೆಸುವುದು ಹೇಗೆ?' 'ಮಕ್ಕಳೊಡನೆ ಆಟ, ಪಾಠ' ಎಂಬ ಸಾಹಿತ್ಯ ಕೃತಿಗಳನ್ನು ಮಕ್ಕಳ ಹೆತ್ತವರಿಗಾಗಿ ನೀಡಿದ್ದರು. ಈಗ ಮಕ್ಕಳೇ ಸ್ವತ: ಓದುವ ಸಣ್ಣ ಕೃತಿಗಳನ್ನು ಬರೆಯುವಂತೆ ಸಲಹೆ ನೀಡಿದ್ದು, ಇದರ ಫಲವಾಗಿದೆ ಈ ಕೃತಿ. ಹಾಡು, ಕಥೆ, ನೀತಿಕಥೆ, ಪ್ರಶ್ನೋತ್ತರ, ಒಗಟು, ತಮಾಷೆ ಇವು ಮಕ್ಕಳ 'ಸ್ವಸ್ಥ ಶರೀರ ಮತ್ತು ಸ್ವಸ್ಥ ಮನಸ್ಸನ್ನು ರೂಪಿಸಲು ಸಹಾಯ ಮಾಡುತ್ತದೆ. ಹಾಗೆಯೇ 'ಬುದ್ದಿಯನ್ನು ಹೆಚ್ಚಿಸಿಕೊಳ್ಳಬಹುದು' 'ಪ್ರಾಮಾಣಿಕತೆಯಿಂದ ಬೆಲೆ ಹೆಚ್ಚುತ್ತದೆ' ಮುಂತಾದ ಸಾಮಾಜಿಕ ಜೀವನ ಮೌಲ್ಯಗಳು ಒಳಗೊಂಡ ಲೇಖನಗಳು ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿರುವುದು ಈ ಕೃತಿಯ ವಿಶೇಷ.
©2024 Book Brahma Private Limited.