ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ !

Author : ಸ್ವಾಮಿ ಸುಖಬೋಧಾನಂದ

Pages 210

₹ 120.00




Year of Publication: 2000
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ !'  ವ್ಯಕ್ತಿತ್ವ ವಿಕಸನ ಬರಹಗಳ ಪುಸ್ತಕವಿದು. ಲೇಖಕ ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದಾರೆ. ದೈನಂದಿನ ಬದುಕಿನಲ್ಲಿ ಅಶಾಂತಿಗೆ ಹಲವೊಮ್ಮೆ ಕಾರಣವಾಗುವ  ಹಾಗೂ ಹೊರಗಿನಿಂದ ಬಂದೊದಗುವ ಆಘಾತಗಳಿಗೆ ನಾವು ವಿಚಲಿತರಾಗದಿರುವುದೇ ಉತ್ಕರ್ಷದ ಹಾದಿ. ಇದು ಸ್ವ-ಶಿಕ್ಷಣದಿಂದ ಸಾಧ್ಯ- ಎಂಬುದು ಸ್ವಾಮಿ ಸುಖಬೋಧಾನಂದರ ಅನುಭವಾಧಾರಿತ ಮಂಡನೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- ’ಮನಸ್ಸೇ ರಿಲ್ಯಾಕ್ಸ್ ಪ್ಲೀಸ್!’ ಹತ್ತಾರು ದೃಷ್ಟಾಂತಗಳ ಮತ್ತು ನೈಜ ಜೀವನ ಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದೆ ಎಂದು ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಸ್ವಾಮಿ ಸುಖಬೋಧಾನಂದ

ಸ್ವಾಮಿ ಸುಖಬೋಧಾನಂದ ಅವರು ಭಾರತೀಯ ಧಾರ್ಮಿಕ ಪರಂಪರೆಯ ಜ್ಞಾನವನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು, ಇವರ ಈ ಕಳಕಳಿಗಾಗಿ 'ಎಸ್ಸೆಲ್‌ ಕರ್ನಾಟಕ ಅತ್ಯುತ್ತಮ ಸಮಾಜಸೇವಾ ಪ್ರಶಸ್ತಿ ಲಭಿಸಿದೆ. ಪಸನ್ನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ಗುರುಗಳು. "ಮನಸ್ಸೇ,ರಿಲ್ಯಾಕ್ಸ್ ಪ್ಲೀಸ್’ ಶೀರ್ಷಿಕೆಯ ಇವರ ಪುಸ್ತಕವು ಹಾಗೂ ಶಿವ ಖೇರಾ ಅವರ ಪುಸ್ತಕ ‘ಯು ಕೆನ್ ವಿನ್ ’ ಕನ್ನಡೀಕರಿಸಿದ್ದು, ತೆಲುಗು, ತಮಿಳು ಸೇರಿದಂತೆ ಭಾರತೀಯ ಹಲವು ಭಾಷೆಗಳಲ್ಲಿ ಅನುವಾದಗೊಂಡಿದೆ. ...

READ MORE

Related Books