ಕಾದಂಬರಿಕಾರ, ಪತ್ರಕರ್ತ ವಿ. ನಟರಾಜು ಅನುವಾದಿಸಿರುವ ಜೋಜಿ ವಿಲ್ಲಿ ಅವರ ’50-50 ಜೀವನಕ್ಕೆ ಸ್ವಲ್ಪ ಮಸ್ಕಾ ಸ್ವಲ್ಪ ಚಸ್ಕಾ’ ಕೃತಿ ವ್ಯಕ್ತಿತ್ವ ವಿಕಸನ ಪ್ರಕಾರಕ್ಕೆ ಸೇರಿದ್ದು. ಧಾವಂತದ ನಡುವೆ ಧ್ಯಾನಿಸು, ಅನುಭವಗಳ ಹಿನ್ನೆಲೆಯಲ್ಲಿ ಬದುಕನ್ನು ವಿಮರ್ಶಿಸಿಕೊ ಎನ್ನುತ್ತ ಪಂಕ್ಚರ್ ಆಗಿರುವ ಜೀವಗಳಿಗೆ ಟಿಂಕ್ಚರ್ ಹಾಕುವ ಕೆಲಸ ಮಾಡುತ್ತದೆ.
ಮುದುಡಿದ ಮನಸ್ಸನ್ನು ಮುದಗೊಳಿಸುವ ಇಂತಹ ಕೃತಿಗಳು ಕನ್ನಡ ಪುಸ್ತಕ ಲೋಕದ ಮಟ್ಟಿಗೆ ಸೇಲಬಲ್ ಕಮಾಡಿಟಿ ಸಹ ಆಗಿರುವುದರಿಂದ ಸಾವಣ್ಣ ಪ್ರಕಾಶನ ತುಂಬು ಹೃದಯದಿಂದ ಈ ರೀತಿಯ ಗ್ರಂಥಗಳ ಪ್ರಕಟಣೆಗೆ ಮುಂದಾಗಿದೆ. ಅಚ್ಚುಕಟ್ಟಾದ ನಿರೂಪಣೆ, ಅಚ್ಚುಕಟ್ಟಾದ ಮುದ್ರಣದ ಕಾರಣಕ್ಕೆ ಕೃತಿ ಗಮನ ಸೆಳೆಯುತ್ತದೆ.
©2024 Book Brahma Private Limited.